ಜನರ ಹಾದಿ ತಪ್ಪಿಸುವ ಬಿಜೆಪಿ: ಕಾಂಗ್ರೆಸ್ ಟೀಕೆ

ಜನರ ಹಾದಿ ತಪ್ಪಿಸುವ ಬಿಜೆಪಿ: ಕಾಂಗ್ರೆಸ್ ಟೀಕೆ

ಪುತ್ತೂರು: ಪುತ್ತೂರಿನ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಶಾಸಕ ಅಶೋಕ್ ರೈ ವಿರುದ್ಧ ಅನಗತ್ಯವಾದ ಟೀಕೆ ಮಾಡುವ ಮೂಲಕ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹಾಗೂ ವಕ್ತಾರ ರವೀಂದ್ರ ನೆಕ್ಕಿಲು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಅಶೋಕಾ ಜನಮನ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಆಗಿದೆ. ಇದಕ್ಕೆ ರಾಜ್ಯ ಸರ್ಕಾರ ಗೃಹ ಇಲಾಖೆ ಹಾಗೂ ಜಿಲ್ಲಾಡಳಿತ ಹೊಣೆ ಎಂದು ಬಿಜೆಪಿಯ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಸಿಎಂ ಎದುರು ಶಕ್ತಿ ಪ್ರದರ್ಶನಕ್ಕಾಗಿ ಬಡಜನತೆಯನ್ನು ಊಟವೂ ಕೊಡದೆ ಕಟ್ಟಿಹಾಕಿದ್ದಾರೆ ಎಂದು ಬಿಜೆಪಿ ಹೇಳಿರುವುದು ಶುದ್ದ ಸುಳ್ಳಲಾಗಿದೆ. 

ಜನ ಪ್ರೀತಿಯಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಊಟದ ಸಂದರ್ಭದಲ್ಲಿ ಕೆಲವರಿಗೆ ತಲೆ ಸುತ್ತು ಬಂದಿರುವ ಘಟನೆಯನ್ನು ಬಿಟ್ಟರೆ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ರಾತ್ರಿ 9.45 ತನಕ ಶಾಸಕರೇ ನಿಂತು ಉಡುಗೊರೆ ಹಂಚುವ ಕೆಲಸ ಮಾಡಿದ್ದಾರೆ. ಯಾವುದೇ ಗೊಂದಲ ಇಲ್ಲದೆ ಕಾರ್ಯಕ್ರಮ ನಡೆದಿದೆ. ಆದರೆ ಮಳೆ ಬಂದ ಕಾರಣ ಸ್ವಲ್ಪ ಕೆಸರು ಸಮಸ್ಯೆ ಉಂಟಾಗಿತ್ತು ಎಂದರು.

ಪ್ರಸ್ತುತ ಶಾಸಕರಾಗಿರುವ ಅಶೋಕ್ ರೈ ಅವರು ಕಳೆದ 13 ವರ್ಷಗಳಿಂದ ದೀಪಾವಳಿ ಕೊಡುಗೆ ನೀಡುತ್ತಾ ಬಂದಿದ್ದಾರೆ. ತಮ್ಮ ಉದ್ಯಮದ ಒಂದು ಪಾಲನ್ನು ಬಡವರಿಗೆ ನೀಡುವ ಕಾರ್ಯ ಇದಾಗಿದ್ದು, ಟ್ರಸ್ಟಿನ ಮೂಲಕ ನೂರಾರು ಯುವಕರಿಗೆ ಉದ್ಯೋಗ, ಪುತ್ತೂರಿಗೆ ಮೆಡಿಕಲ್ ಕಾಲೇಜು, ದೇವಳದ ಅಭಿವೃದ್ಧಿ ಸೇರಿದಂತೆ ಹಲವಾರು ಅಭಿವೃದ್ಧಿ ಪರ ಕೆಲಸಗಳಲ್ಲಿ ನಿರತರಾಗಿದ್ದಾರೆ. ಆದರೆ ಬಿಜೆಪಿಯವರು ಅಭಿವೃದ್ಧಿಗೆ ಬೆಂಬಲ ಕೊಡದೆ ಸುಮ್ಮನೆ ಟೀಕೆ ಮಾಡುವ ಕೃತ್ಯಕ್ಕೆ ಇಳಿದಿದ್ದಾರೆ. ವಿರೋಧ ಪಕ್ಷವಾಗಿ ನಿಂತು ಅವರು ಸುವಿಚಾರದ ಬಗ್ಗೆ ಟೀಕೆ ಮಾಡಲಿ. ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುವುದು ಬೇಡ ಎಂದರು. 

ಟೀಕೆ ಮಾಡುವುದೇ ಗುರಿ

ಬಿಜೆಪಿಯವರಿಗೆ ಕೇವಲ ಟೀಕಿಸುವುದೇ ಗುರಿಯಾಗಿದೆ. ಮೆಡಿಕಲ್ ಕಾಲೇಜು ವಿಚಾರದಲ್ಲೂ ಅದು ಸುಳ್ಳು ಎಂದು ಪ್ರಚಾರ ಮಾಡಿದರು. ಆದರೆ ಜನಮನದಲ್ಲಿ ಮುಖ್ಯಮಂತ್ರಿ ಅವರೇ ಬಿಜೆಪಿಯ ಸುಳ್ಳಿಗೆ ಉತ್ತರ ಕೊಟ್ಟಿದ್ದಾರೆ. ಪಂಚ ಗ್ಯಾರಂಟಿ ನಿಲ್ಲುತ್ತದೆ ಎಂದು ಹೇಳಿದರು. ಆದರೆ ಅದೂ ಕೂಡಾ ನಡೆಯುತ್ತಲೇ ಇದೆ. ಇಂತಹ ಅನಗತ್ಯ ಸುಳ್ಳು ಹೇಳಿಕೆಗಳು ಬೇಡ. ನಮ್ಮ ಪುತ್ತೂರಿನ ಅಭಿವೃದ್ಧಿ ಬಗ್ಗೆ ಸಮರ್ಪಕ ಸಲಹೆಗಳನ್ನು ನೀಡಲಿ. ಇದು ವಿರೋಧ ಪಕ್ಷದ ಕೆಲಸವಾಗಲಿ ಎಂದು ಅವರು ತಿಳಿಸಿದರು. 

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೂನ್ ಸ್ವಿಕ್ವೆರಾ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಬ್ದುಲ್ ರಹಿಮಾನ್ ಅಜಾದ್, ಮಾದ್ಯಮ ವಕ್ತಾರ ಸುಪ್ರಿತ್ ಕಣ್ಣಾರಾಯ ಉಪಸ್ಥಿತರಿದ್ದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article