ಕಠಿಣ ಪರಿಶ್ರಮ ಮತ್ತು  ನಿರಂತರ ಪ್ರಯತ್ನ ಗುರಿಯನ್ನು ತಲುಪುವಂತೆ ಮಾಡುತ್ತದೆ: ರಕ್ಷಿತಾ ಶಿಶಿರ್

ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ ಗುರಿಯನ್ನು ತಲುಪುವಂತೆ ಮಾಡುತ್ತದೆ: ರಕ್ಷಿತಾ ಶಿಶಿರ್


ಉಜಿರೆ: ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದಲ್ಲಿ, 2023-2025 ಶೈಕ್ಷಣಿಕ ವರ್ಷದಲ್ಲಿ ಎಂಸಿಜೆ ವಿಭಾಗದಲ್ಲಿ ಪದವಿಪಡೆದು, ಉತ್ತೀರ್ಣರಾಗಿ ಇದೀಗ ಜೀ ಪವರ್ ವಾಹಿನಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಹಳೆ ವಿದ್ಯಾರ್ಥಿನಿಯಾದ ರಕ್ಷಿತಾ ಶಿಶಿರ್  ಶನಿವಾರದಂದು ಕಾಲೇಜಿಗೆ ಭೇಟಿ ನೀಡಿ  ಅನುಭವವನ್ನು ವಿಭಾಗದ  ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಳೊಂದಿಗೆ ಮತ್ತು ಶಿಕ್ಷಕರ ಜೊತೆಗೆ ಹಂಚಿಕೊಂಡರು.

ಹೊರ ಪ್ರಪಂಚದಲ್ಲಿ ಇದೀಗ ಎಲ್ಲ ಕ್ಷೇತ್ರದಲ್ಲೂ ಎಸ್ ಡಿ ಎಂ ವಿದ್ಯಾರ್ಥಿಗಳೇ ಸದ್ದು ಮಾಡುತ್ತಿದ್ದು, ತಮ್ಮ ತಮ್ಮ ಕೆಲಸಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸುವ ಮೂಲಕ ಮುಂಬರುವ ವಿದ್ಯಾರ್ಥಿಗಳಿಗೆ ಒಂದು ಅಡಿಪಾಯವನ್ನು ಹಾಕುತ್ತಿದ್ದಾರೆ. ಅದನ್ನು ಎಷ್ಟು ಸದೃಢತೆಯಿಂದ ಬಳಿಸಿಕೊಳ್ಳುವುತ್ತೇವೆ ಎಂಬುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ಕಠಿಣ ಪರಿಶ್ರಮ ಮತ್ತು  ನಿರಂತರ ಪ್ರಯತ್ನ ತಮ್ಮ ಗುರಿಯನ್ನು ತಲುಪುವಂತೆ ಮಾಡುತ್ತದೆ ಹಾಗೂ ಬಹು ಮುಖ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಸಹ ತಾಳ್ಮೆಯನ್ನುವುದು ತನ್ನ ವ್ಯಕ್ತತ್ವವನ್ನು ಗುರುತಿಸುತ್ತದೆ.

ನಾವು ಎಷ್ಟು ಚೆನ್ನಾಗಿ ಈ ಕ್ಷೇತ್ರದಲ್ಲಿ ನಮ್ಮ ನೆಟ್ ವರ್ಕ್ ಗಳನ್ನು ಇಟ್ಟುಕೊಳ್ಳುತ್ತೇವೆ  ಎಂಬುದರ ಮೇಲೆ ನಮ್ಮ ಜೀವನ ಆಧಾರವಾಗಿರುತ್ತದೆ ಎಂದು ಕಿವಿ ಮಾತು ಹೇಳಿದರು.

ಪ್ರಸಕ್ತ  ಮನರಂಜನಾ ಕ್ಷೇತ್ರದಲ್ಲಿ ಹಲವಾರು ರೀತಿಯಲ್ಲಿ ಉದ್ಯೋಗಾವಕಾಶಗಳು ಇದ್ದು, ಯಾರೋ ಹೇಳುವ ಗಾಳಿ ಸುದ್ದಿಗಳಿಗೆ ಕಿವಿ ನೀಡದೆ, ತಮ್ಮ ಗುರಿಯಡೆಗೆ ತಲುಪುವುದು ಬಲು ಮುಖ್ಯ ಎಂದರು.

ಈ  ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ್ ಹೆಗಡೆ ಮತ್ತು ಶಿಕ್ಷಕರಾದ ಸುನೀಲ್ ಕುಮಾರ್ ಸಹ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article