ನ.1ರಂದು ಮಂಗಳೂರು ‘ಪರಿವರ್ತನಾ’ ಮಹಿಳಾ ಸಮಾವೇಶ

ನ.1ರಂದು ಮಂಗಳೂರು ‘ಪರಿವರ್ತನಾ’ ಮಹಿಳಾ ಸಮಾವೇಶ

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ಪ್ರಿಯದರ್ಶಿನಿ ಮಹಿಳಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ “ಪರಿವರ್ತನಾ” ಮಹಿಳಾ ಸಮಾವೇಶ ನವೆಂಬರ್ 1ರಂದು ಮಧ್ಯಾಹ್ನ 12 ಗಂಟೆಗೆ ಅಂಬಿಕಾರೋಡ್ನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ ಎಂದು ಗೇರು ಕೃಷಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದರು. 

ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

‘ನಮ್ಮ ಕಥೆ, ನಮ್ಮ ಶಕ್ತಿ, ನಮ್ಮ ಯಶಸ್ಸು  ಬನ್ನಿ ಮಹಿಳಾ ಸಮಾವೇಶದಲ್ಲಿ’ ಎಂಬ ಘೋಷಣೆಯಡಿ ಆಯೋಜಿಸಲಾದ ಈ ಸಮಾವೇಶದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಮುಖ ಮಹಿಳಾ ನಾಯಕಿಯರು ಭಾಗವಹಿಸಿ ದಿಕ್ಕೂಚಿ ಸಂದೇಶ ನೀಡಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಮಹಿಳಾ ಶಕ್ತಿಯ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ಎಂದರು. 

ಸಮಾವೇಶದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ  ಚಂದ್ರಿಕಾ ರೈ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ , ವೃಂದ ಪೂಜಾರಿ ಮೇರಮಜಲು ನೇತೃತ್ವ ವಹಿಸಿದ್ದು, ಎಲ್ಲ ಮಹಿಳೆಯರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ ಎಂದರು.

ಚಂದ್ರಿಕಾ ರೈ ಮಾತನಾಡಿ ಕಾರ್ಯಕ್ರಮದ ಅಂಗವಾಗಿ ಉಳ್ಳಾಲ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ, ನಗರಸಭೆ, ಪಟ್ಟಣಪಂಚಾಯತ್ , ಪುರಸಭೆಯ ಮಹಿಳೆಯರಿಗೆ ಲಕ್ಕಿ ಡ್ರಾ ವನ್ನುನಡೆಸಲಾಗುವುದು. 

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಂದು ಮಹಿಳೆಯರು ಈ ಲಕ್ಕಿ ಡ್ರಾ ದಲ್ಲಿ ಭಾಗವಹಿಸಬಹುದಾಗಿದ್ದು ಡ್ರಾ ನಡೆಯುವ ಸಂದರ್ಭ ಇದ್ದ ಮಹಿಳೆಯರಿಗೆ ಮಾತ್ರ ವಿಜೇತರು ಎಂದು ಪರಿಗಣಿಸಲಾಗುವುದು . ಲಕ್ಕಿ ಡ್ರಾ ವಿಜೇತರಿಗೆ ಮಹಿಳಾ ಸ್ವಾವಲಂಬಿ ದೃಷ್ಟಿ ಯಿಂದ ಹೊಲಿಗೆ ಮೆಷಿನ್ ನು ನೀಡಲಾಗುವುದು ಇದು ತಾಲೂಕಿನ ಪ್ರತಿ ಗ್ರಾಮ, ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆಯ ಒಂದೊಂದು ಅದೃಷ್ಟ ಮಹಿಳೆಯರಿಗೆ ನೀಡಲಾಗುವುದು ಎಂದರು.

ವೃಂದ ಪೂಜಾರಿ ಮೇರು ಮಜಲು, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ  ಸುರೇಖಾ ಚಂದ್ರಹಾಸ್ , ರಾಜ್ಯ ವರ್ಕ್ಬ್ ಸಮಿತಿ ಸದಸ್ಯ ರಾದ ರಜಿಯಾ ಇಬ್ರಾಹಿಂ, ಉಳ್ಳಾಲ ನಗರ ಸಭೆ ಅಧ್ಯಕ್ಷೆ ಶಶಿಕಲಾ, ಪ್ರಭಾವತಿ ಆರ್ ಶೆಟ್ಟಿ, ಅಮಿತಾ ಅಶ್ವಿನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article