ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಕೆನಡ ಹಾಗೂ ಬ್ರಿಟನಿನ ಪ್ರಜೆಗಳಿಬ್ಬರ ಭೇಟಿ
ಈ ಸಂದರ್ಭ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ್ ಪೂಜಾರಿ ಹಾಗೂ ಕಾರ್ಯದರ್ಶಿ ಡಾ. ಆಶಾಲತ ಸುವರ್ಣ ಅವರು ತುಳುವ ಸಂಸ್ಕೃತಿಯ ಕುರಿತು ತಂಡಕ್ಕೆ ಮಾಹಿತಿ ನೀಡಿದರು.
ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ವಸ್ತುಸಂಗ್ರಹಾಲಯದಲ್ಲಿನ ಪ್ರಾಚೀನ ವಿವಿಧ ವಸ್ತುಗಳನ್ನು ವೀಕ್ಷಿಸಿದ ಕೆನಡದ ಕೆರೀನ್ ಹಾಗೂ ಬ್ರಿಟನಿನ ರಾಬರ್ಟ್ ಅವರು ಈ ಕೇಂದ್ರ ಸಂಸ್ಕೃತಿ ಆಸಕ್ತರಿಗೆ ನಿಧಿಯಂತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಇತ್ತೀಚೆಗಷ್ಟೆ ಇಟಲಿಯ ಮಿನಾನಿನ ಡಾ. ರುಬಾನ್ ನೇತೃತ್ವದ ವಿದ್ಯಾರ್ಥಿಗಳ ತಂಡ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿತ್ತು. ಡಾ. ತುಕರಾಮ್ ಪೂಜಾರಿ-ಡಾ.ಆಶಾಲತಾ ಸುವರ್ಣ ದಂಪತಿಯ ಮಾರ್ಗದರ್ಶನದಲ್ಲಿ ನಡೆಯುವ ಈ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಸಂಸ್ಕೃತಿಯನ್ನು ಬಿಂಬಿಸುವ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಹಿನ್ನಲೆ, ಐತಿಹ್ಯವನ್ನು ಹೊಂದಿರುವ ಅಧ್ಯಯನಕ್ಕು ಯೋಗ್ಯವಾಗಿರುವ ಪ್ರಾಚೀನ ವಸ್ತುಗಳು ಸಂಗ್ರಹಾಲಯದಲ್ಲಿದ್ದು, ದೇಶ ವಿದೇಶದಿಂದ ಆಸಕ್ತರು, ಅಧ್ಯಯನಕಾರರು, ಇತಿಹಾಸಕಾರರು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗಾಗಮಿಸುತ್ತಿದ್ದಾರೆ. ಇಂತಹ ವಸ್ತು ಸಂಗ್ರಹಾಲಯ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳದಲ್ಲಿರುವುದೇ ಹೆಮ್ಮೆಯ ಸಂಗತಿಯಾಗಿದೆ.