ಬೆಂಜನಪದವಿನಲ್ಲಿ ಸುಸಜ್ಜಿತ ಕ್ರೀಡಾಂಗಣಕ್ಕೆ ಖೇಲ್ ಇಂಡಿಯಾಕ್ಕೆ ಪ್ರಸ್ತಾವನೆ ಸಲ್ಲಿಕೆ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ ಎಸ್‌ವಿಎಸ್ ಶಾಲಾ ಆಟದ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ನಾವೂರು ಸರಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಟಲ್, ಬ್ಯಾಡ್ಮಿಂಟನ್ ರೀತಿಯ ಕ್ರೀಡಾಕೂಟಗಳು ಕೂಡ ತಾಲೂಕು ಕೇಂದ್ರದ ಜಾಗದಲ್ಲಿ ನಡೆಯುವ ವ್ಯವಸ್ಥೆ ಕಲ್ಪಿಸಲಾಗುವುದು ಮುಂದಿನ ದಿನಗಳಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟಗಳು ಬಂಟ್ವಾಳದಲ್ಲೇ ನಡೆಯುವಂಥ ವ್ಯವಸ್ಥೆ ನಿರ್ಮಾಣವಾಗಬೇಕು ಎಂದರು.
ಮಾಜಿ ಸಚಿವ ರಮಾನಾಥ ರೈ ಶುಭ ಹಾರೈಸಿದರು. ಬುಡಾ ಅಧ್ಯಕ್ಷ ಬೇಬಿ ಕುಂದರ್ ಕ್ರೀಡಾಕೂಟ ಉದ್ಘಾಟಿಸಿದರು. ನಾವೂರು ಗ್ರಾಪಂ ಅಧ್ಯಕ್ಷೆ ಇಂದಿರಾ, ಬಂಟ್ವಾಳ ತಹಸೀಲ್ದಾರ್ ಮಂಜುನಾಥ್, ಬಿಇಒ ಮಂಜುನಾಥನ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಎಸ್‌ವಿಎಸ್ ಶಾಲಾ ಮುಖ್ಯ ಶಿಕ್ಷಕಿ ರೋಷನಿ, ಶಿಕ್ಷಕರ ಸಂಘಟನೆಯ ಅಖಿಲ್ ಶೆಟ್ಟಿ, ಜಗದೀಶ್ ರೈ, ನವೀನ್ ಪಿಎಸ್, ಸುಕನ್ಯಾರತ್ನ, ಇಂದುಶೇಖರ, ಇಸಿಓಗಳಾದ ರಮಾನಂದ ನೂಜಿಪ್ಪಾಡಿ, ಸುಧಾ, ಪ್ರತಿಮಾ, ನಾವೂರು ಪಿಡಿಒ ರಾಬರ್ಟ್ ಫೆರ್ನಾಂಡೀಸ್, ಸಿಆರ್‌ಪಿ ಆಂಜನೇಯ, ಸರಕಾರಿ ನೌಕರರ ಸಂಘದ ತಾಲೂಕು ನಿಕಟಪೂರ್ವ ಅಧ್ಯಕ್ಷ ಉಮಾನಾಥ ರೈ ಮೇರಾವು, ಉದ್ಯಮಿ ಶನ್ಫತ್ ಶರೀಫ್ ಸಹಿತ ನಾನಾ ಸ್ವಯಂಸೇವಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ ಕಾರ್ಯಕ್ರಮ ನಿರ್ವಹಿಸಿದರು.