ರಥಬೀದಿ ಕಾಲೇಜಿನ ಸಮಾಜ ಕಾರ್ಯ ವೇದಿಕೆ 'ಸಾರಥ್ಯ' 2025-26 ಉದ್ಘಾಟನೆ
Monday, November 3, 2025
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ 'ಸಾರಥ್ಯ' 2025-26 ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಶೀನ ಶೆಟ್ಟಿ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪರಿಸರ ಸ್ವಚ್ಛತೆ ಹಾಗೂ ಸಮಾಜ ಕಾರ್ಯ ಕ್ಷೇತ್ರ ಕಾರ್ಯದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜನ ಶಿಕ್ಷಣ ಟ್ರಸ್ಟ್ ನ ಸಹನಿರ್ದೇಶಕ ಕೃಷ್ಣ ಮೂಲ್ಯ ಅವರು ವಿದ್ಯಾರ್ಥಿಗಳಿಗೆ ಸಮಾಜ ಕಾರ್ಯ ವಿಷಯದ ಮತ್ತು ವೃತ್ತಿಯಲ್ಲಿ ಅಳವಡಿಕೆಯ ಮಹತ್ವ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಮಾತನಾಡಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ದೇವಿಪ್ರಸಾದ ಉಪಸ್ಥಿತರಿದ್ದರು.
ಸಮಾಜ ಕಾರ್ಯದ ಮುಖ್ಯಸ್ಥ ಡಾ. ನಿತಿನ್ ಎ. ಚೋಳ್ವೆಕರ್ ಪ್ರಾಸ್ತಾವಿಕ ಮಾತನಾಡಿ, ಸಾರಥ್ಯ ವೇದಿಕೆಯನ್ನು ಪರಿಚಯಿಸಿದರು. ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಶ್ರೀಕಲ ಕುಮಾರಿ ಮತ್ತು ಸುಚಿತ್ರ ಸ್ವಾಗತಿಸಿದರು. ವಿದ್ಯಾರ್ಥಿ ಸ್ಪರ್ಶ ಕಾರ್ಯಕ್ರಮವನ್ನು ನಿರೂಪಿಸಿ ನಿಶಾ ವಂದಿಸಿದರು.

