ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ


ಮಂಗಳೂರು: ಕನ್ನಡವನ್ನು ಉಳಿಸಿಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ. ಕನ್ನಡ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಮೂಲಕ ಕನ್ನಡವನ್ನು ಉಳಿಸಲು ಸಾಧ್ಯ ಎಂದು ಎಕ್ಸ್‌ಪರ್ಟ್ ಕಾಲೇಜಿನ ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕ ಶ್ಯಾಮ್ ಪ್ರಸಾದ್ ಹೇಳಿದರು.


ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಆಯೋಜಿಸಿದ 69ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಕನ್ನಡದಲ್ಲಿ ಅತ್ಯುತ್ತಮ ಪುಸ್ತಕಗಳು ಇವೆ. ಅದೇ ರೀತಿ ಈಗ ಜಗತ್ತು ಕೊಂಡಾಡುವ ಚಲನಚಿತ್ರಗಳು ಬರುತ್ತಿವೆ. ಇದು ಕನ್ನಡದ ಬಗ್ಗೆ ಆಶಾಭಾವನೆ ಮೂಡಿಸುವ ಆಶಾಕಿರಣಗಳು. ಯಾರೂ ಮಾಡದ ಸಾಧನೆಯನ್ನು ಕನ್ನಡಿಗರು ಮಾಡಿದಾಗ ಕನ್ನಡದ ಅಭಿಮಾನ ಕನ್ನಡಿಗರಿಗೆ ಉಂಟಾಗುತ್ತದೆ. ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮ್ಮಸಹಾಯಕ್ಕೆ ನಮ್ಮ ಮಾತೃಭಾಷೆಯಾದ ಕನ್ನಡವೇ ಸಹಕರಿಸುತ್ತದೆ ಎಂದವರು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್ ಕನ್ನಡ ಬಾವುಟವನ್ನು ಅರಳಿಸಿ, ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು.

ಉಪಪ್ರಾಂಶುಪಾಲರಾದ ಸುಬ್ರಹ್ಮಣ್ಯ ಉಡುಪ(ಶೈಕ್ಷಣಿಕ) ಮತ್ತು ಧೃತಿ ವಿ. ಹೆಗ್ಡೆ(ಆಡಳಿತ), ವಸತಿ ನಿಲಯದ ಮುಖ್ಯ ಮಾರ್ಗದರ್ಶಕಿ ಅನಿತಾ ಪಿ. ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕಿ ನಿಖಿತಾ ಅಮಿನ್, ಆಡಳಿತ ಅಧಿಕಾರಿ ಅಶ್ವಿಲ್ ಕರ್ಕೇರ ಕೆ., ಕಾರ್ಯಕ್ರಮ ನಿರ್ದೇಶಕಿ ಸಾಧ್ವೀ ಅಶೋಕ್, ಕನ್ನಡ ವಿಭಾಗದ ಮುಖ್ಯಸ್ಥೆ ವಿಪುಲ ಬಿ. ಶೆಟ್ಟಿ, ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಶ್ರೀಕೃಷ್ಣ ಭಟ್, ವಿದ್ಯಾಶಾರದಾ ಜಿ.ಕೆ., ಸುರೇಶ್ ಎಡನಾಡು, ಸರಸ್ವತಿ ಬಿ.ಎನ್. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article