ಹರಿದ್ವರ್ಣ ಕಿರುಚಿತ್ರ ಬಿಡುಗಡೆ
ಮಂಗಳೂರು: ಕಸ್ವಿ ಹಸಿರು ದಿಬ್ಬಣ ಗಿಡ ಬೆಳೆಸಿ ಹುಟ್ಟು ಹಬ್ಬ ಹೊಸ ಪೀಳಿಗೆ ಉಸಿರಾಗಲಿ ಎಂಬ ಧ್ಯೇಯವಾಕ್ಯದೊಂದಿಗೆ ನಿರಂತರ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಈ ತಂಡದಿಂದ ನಿರ್ಮಾಣಗೊಂಡ ಹರಿದ್ವರ್ಣ ಕಿರುಚಿತ್ರ ಯೂಟ್ಯೂಬ್‌ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮಾರ್ಗದರ್ಶಕ ಕೇಶವ ರಾಮಕುಂಜ ತಿಳಿಸಿದರು.
Recc ZZ Rp×bfl ಯೂಟ್ಯೂಬ್‌ನಲ್ಲಿ ಸೋಮವಾರ ಕಿರುಚಿತ್ರ ಬಿಡುಗಡೆಗೊಂಡಿದೆ. ಈ ಚಿತ್ರಕ್ಕೆ ಶ್ರದ್ಧಾ ಕೇಶವ ರಾಮಕುಂಜ ನಿರ್ಮಾಪಕರಾಗಿದ್ದು, ಚೇತನ್ ಕೆ. ವಿಟ್ಲ ಕಥೆ-ಚಿತ್ರಕಥೆ- ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ. ಸಹನಿರ್ದೇಶನವನ್ನು ಅಚಲ್ ವಿಟ್ಲ, ಸಹಬರವಣಿಗೆ ರಮ್ಯ ಚೇಯನ್, ಛಾಯಾಗ್ರಹಣ ರಮ್ಯಚೇತನ್, ಛಾಯಾಗ್ರಹಣ ಸುರೇಶ್ ಗೌಡ, ಮನ್ವಿತ್ ಕುಂಡಡ್ಕ, ಸಂಕಲನ ಬಾತು ಕುಲಾಲ್, ಪ್ರಚಾರ ಕಲೆ ಚೇತನ್ ಆಚಾರ್ಯ, ಹಿನ್ನಲೆ ಸಂಗೀತ ಶಬರೀಶ್, ಸಾಹಿತ್ಯ ಕೃಷ್ಣ ಭಟ್, ಧ್ವನಿ ಮುದ್ರಣ ಮ್ಯೂಸಿಕಲ್ ವರ್ಲ್ಡ್ ಕಬಕ ನೀಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಹರಿದ್ವರ್ಣ ಒಂದು ಪರಿಸರದ ಕಥೆಯ ಸಾರಾಂಶ ಉಳ್ಳ ಚಿತ್ರವಾಗಿದೆ. ಎಳೆವೆಯಿಂದಲೇ ಮಕ್ಕಳಿಗೆ ಪರಿಸರದ ಮಹತ್ವ ಅದರ ಮಲ್ಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ನಿರ್ಮಾಪಕಿ ಶ್ರದ್ಧಾ ಕೇಶವ ರಾಮಕುಂಜ, ನಿರ್ದೇಶಕ ಚೇತನ್ ಕೆ. ವಿಟ್ಲ ಉಪಸ್ಥಿತರಿದ್ದರು.