ಎಕ್ಸ್‌ಪರ್ಟ್‌ನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ
Saturday, November 1, 2025
ಮಂಗಳೂರು: ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಯಿತು. ಈ ದಿನವು 1956ರಲ್ಲಿ ಕರ್ನಾಟಕ ರಾಜ್ಯವು ಏಕೀಕೃತಗೊಂಡ ದಿನವಾಗಿದ್ದು, ಕನ್ನಡ ಭಾಷೆಯ ಗೌರವ ಮತ್ತು ಏಕತೆಯ ಪ್ರತೀಕವಾಗಿದೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಅವರು ಮಾತನಾಡುತ್ತ ಕನ್ನಡದ ಪರಂಪರೆ, ಸಂಸ್ಕೃತಿ ಮತ್ತು ಗೌರವವನ್ನು ಕಾಪಾಡುವ ಅಗತ್ಯತೆಯ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ಅವರು ಕನ್ನಡ ರಾಜ್ಯೋತ್ಸವವು ಪ್ರತಿ ಕನ್ನಡಿಗನಿಗೂ ಹೆಮ್ಮೆಯ ದಿನವಾಗಿದ್ದು, ನಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಯುವಜನತೆ ತೊಡಗಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕೋಚಿಂಗ್ ಸಂಯೋಜಕರು ಮತ್ತು ಕನ್ನಡ ಉಪನ್ಯಾಸಕರಾದ ಕರುಣಾಕರ ಬಳ್ಕೂರು, ಸಹಾಯಕ ಕೋಚಿಂಗ್ ಸಂಯೋಜಕರು ಮತ್ತು ಹಿಂದಿ ವಿಭಾಗದ ಉಪನ್ಯಾಸಕರಾದ ಪ್ರಮೋದ್ ಕಿಣಿ, ಕನ್ನಡ ಉಪನ್ಯಾಸಕಿ ರಮ್ಯಾ ಅನಿಲ್, ಇನ್ನಿತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರಥಮ ಪಿಯು ವಿದ್ಯಾರ್ಥಿನಿ ಶ್ರೀವಿದ್ಯಾ ಸುಂದರವಾಗಿ ನಿರ್ವಹಿಸಿದರು.
ವಿದ್ಯಾರ್ಥಿಗಳು ಕನ್ನಡ ನಾಡಿನ ವೈಭವ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಮನಮುಟ್ಟುವ ಗೀತೆಗಳು ಹಾಗೂ ಪ್ರೇರಣಾದಾಯಕ ಭಾಷಣಗಳನ್ನು ನೀಡಿ ಎಲ್ಲರ ಮನಸೂರೆಗೊಂಡರು.
ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕನ್ನಡ ತಾಯಿಗೆ ನಮನ ಸಲ್ಲಿಸಿ, ನಾಡಿನ ಗೌರವವನ್ನು ಉಳಿಸಲು ಶಪಥವನ್ನೂ ಸ್ವೀಕರಿಸಿದರು.
ಕಾರ್ಯಕ್ರಮವು ಸಾಂಸ್ಕೃತಿಕ ವೈಭವ ಮತ್ತು ಕನ್ನಡ ನಿಷ್ಠೆಯ ಹಬ್ಬದ ವಾತಾವರಣದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.


