ಅಪಘಾತದಲ್ಲಿ ದುರ್ಮರಣ: ಆಸ್ಪತ್ರೆಗೆ ದೌಡಾಯಿಸಿದ ಸ್ಪೀಕರ್
Saturday, November 15, 2025
ಮಂಗಳೂರು: ಮಂಗಳೂರು ರಾಷ್ಟೀಯ ಹೆದ್ದಾರಿ ಪಣಂಬೂರು ಬಳಿ ರಿಕ್ಷಾ ಹಾಗೂ ಟ್ಯಾಂಕರ್‌ಗಳ ಮದ್ಯೆ ಭೀಕರ ಅಪಘಾತ ಸಂಭವಿಸಿ ರಿಕ್ಷಾ ಚಾಲಕ ಸಹಿತ ಅದರಲ್ಲಿ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಮರಣ ಹೊಂದಿದ್ದು ಸಭಾಧ್ಯಕ್ಷ ಯು.ಟಿ. ಖಾದರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ದೌಡಾಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು. ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತ ಪಡಿಸಿರುವ ಅವರು ಮೃತರಲ್ಲಿ ಇಬ್ಬರು ಬೀಡಿ ಕಾರ್ಮಿಕರಾಗಿದ್ದು, ಬೀಡಿ ಕಾರ್ಮಿಕರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಲಿ ಮಾತುಕತೆ ನಡೆಸಿದ್ದು ಮೃತರ ಕುಟುಂಬಸ್ಥರಿಗೆ ಪರಿಹಾರ ದೊರಕಿಸಿ ಕೊಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ.







