ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ

ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ


ಮಂಗಳೂರು: ಸುರತ್ಕಲ್ ನ ಡಾ.ಶಶಿಕಾಂತ್ ಕೌಡೂರು ಅವರು ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಡಾ.ಶಶಿಕಾಂತ ಕೌಡೂರು ಅವರು ನ.1ಮತ್ತು 2 ರಂದು ಬೆಂಗಳೂರಿನಲ್ಲಿ ಜರುಗಿದ ಕರ್ನಾಟಕ ರಾಜ್ಯಮಟ್ಟದ ಮಾಸ್ಟರ್ಸ್ ಈಜುಸ್ಪರ್ಧೆಯಲ್ಲಿ ಐವತ್ತು ಮೀ. ಬ್ಯಾಕ್ ಸ್ಟ್ರೋಕ್ ಶೈಲಿಯಲ್ಲಿ ಚಿನ್ನ ಹಾಗೂ 50*4 ಟೀಮ್ ಮೆಡ್ಲೆ ರಿಲೇಯಲ್ಲಿ ಕಂಚು ಗಳಿಸಿದರು. 

ಡಾ. ಕೌಡೂರು ಅವರು ಎನ್‌ಐಟಿಕೆ ಸುರತ್ಕಲ್‌ನ ಪ್ರಾಧ್ಯಾಪಕರಾಗಿದ್ದಾರೆ ಹಾಗೂ ಎನ್‌ಐಟಿಕೆ ಸ್ವಿಮಿಂಗ್ ಕ್ಲಬ್ ನ ಸದಸ್ಯರಾಗಿದ್ದಾರೆ. 

ಇವರು ನ.21 ರಿಂದ 23ರ ವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಈಜುಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ಓIಖಿಏ ಸ್ವಿಮ್ಮಿಂಗ್ ಪೂಲ್ ನ ತರಬೇತುದಾರ ಸಂತೋಷ ಪಿ.ಎಂ.ತರಬೇತಿ ನೀಡಿರುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article