ಶ್ರೀ ವೆಂಕಟರಮಣ ದೇವಳದಲ್ಲಿ ‘ಕಾರ್ತಿಕ ಏಕಾದಶಿ’
Monday, November 3, 2025
ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ‘ಕಾರ್ತಿಕ ಏಕಾದಶಿ’ ಪರ್ವ ದಿನದಂದು ಪ್ರಧಾನ ಶ್ರೀ ಭೂ ಸಹಿತ ವೀರ ವೆಂಕಟೇಶ ದೇವರು ಹಾಗೂ ಉತ್ಸವ ಶ್ರೀನಿವಾಸ ದೇವರಿಗೆ ಗಂಗಾಭಿಷೇಕ, ಬ್ರಹ್ಮಕಲಶಾಭಿಷೇಕ ಇಂದು ಸಾಯಂಕಾಲ ಶ್ರೀ ದೇವಳದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಕೆ. ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ದೇವಳದ ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ, ಪ್ರಧಾನ ಅರ್ಚಕರಾದ ಕೆ. ಚಂದ್ರಕಾಂತ್ ಭಟ್, ಹರೀಶ್ ಭಟ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.