ಅಳಿಯೂರು ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ
Saturday, November 15, 2025
ಮೂಡುಬಿದಿರೆ: ಸರ್ಕಾರಿ ಪ್ರೌಢಶಾಲೆ ಅಳಿಯೂರಿನಲ್ಲಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಚಿತ್ರಕಲಾ ಶಿಕ್ಷಕಿ ರಂಜನಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಚಿಸಿದ ಜವಾಹರಲಾಲ್ ನೆಹರು ಅವರ ಕೊಲಾಜ್ ನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಅವರು ಅನಾವರಣಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾಜ ವಿಜ್ಞಾನ ಶಿಕ್ಷಕಿ ವಿದ್ಯಾ ಟಿ. ಅವರು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಬೆಂಗಳೂರಿನಿಂದ ನೇರಪ್ರಸಾರವಾದ ಸರ್ಕಾರದಿಂದ ನಡೆಸಲಾದ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಲಾಯಿತು.
ಗಣಿತ ಶಿಕ್ಷಕಿ ಡಾ.ಆನಿ ಡಿಂಪಲ್ ಕ್ಯಾಸ್ತಲಿನೋ ಅವರು ಶಾಲೆ ಹಾಗೂ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನಶಾ ಮುಕ್ತ ಭಾರತದ ಪ್ರತಿಜ್ಞೆಯನ್ನು ಪೋಷಕರಿಗೆ ಬೋಧಿಸಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಪದ್ಮಿನಿ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಮಂಜುಳಾ ಕಾಯ೯ಕ್ರಮ ನಿರೂಪಿಸಿದರು. ಗಣಿತ ಶಿಕ್ಷಕಿ ವಿದ್ಯಾ ಸಂದೀಪ್ ನಾಯಕ್ ಅವರು ವಂದಿಸಿದರು.
