ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ 13ನೇ ವರ್ಷದ ಭಕ್ತಿ ಭಜನೆಯ ಪಾದಯಾತ್ರೆ

ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ 13ನೇ ವರ್ಷದ ಭಕ್ತಿ ಭಜನೆಯ ಪಾದಯಾತ್ರೆ


ಉಜಿರೆ: ಸರ್ವಧರ್ಮ ಸಮನ್ವಯ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ನಡೆಯಲಿರುವ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಪರ್ವಕಾಲದಲ್ಲಿ ಬೆಳ್ತಂಗಡಿ ತಾಲೂಕಿನ ಸಮಸ್ತ ಭಗವದ್ಭಕ್ತರು ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿದಿ ಕಡೆಗೆ 13ನೇ ವರ್ಷದ ಭಕ್ತಿ ಭಜನೆಯ ಪಾದಯಾತ್ರೆಗೆ  ನ.15 ರಂದು ಅಪರಾಹ್ನ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ರಾಷ್ಟ್ರದ ಸುಖ ಶಾಂತಿ, ನೆಮ್ಮದಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಿ, ಮುಂಭಾಗದ ಧ್ವಜಸ್ಥಂಭದ ಬಳಿ ದೀಪ ಪ್ರಜ್ವಲಿಸಿ, ಈಡುಗಾಯಿ ಒಡೆಯುವ ಮೂಲಕ ಧರ್ಮಸ್ಥಳ ಪಾದಯಾತ್ರೆಗೆ ಚಾಲನೆ ನೀಡಿದರು.

ಬೆಳ್ತಂಗಡಿ ಹಳೇಕೋಟೆ ಶ್ರೀ ಸತ್ಯಸಾಯಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ಉಜಿರೆ ವೃತ್ತದಲ್ಲಿ ವಿವಿಧ ಭಜನಾ ತಂಡಗಳಿಂದ ನೃತ್ಯ ಭಜನೆ ವಿಶೇಷ ಆಕರ್ಷಣೆಯಾಗಿತ್ತು.

ಪಾದಯಾತ್ರೆಯಲ್ಲಿ ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ ಶೆಟ್ಟಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಐಟಿ ವಿಭಾಗದ ಸಿಇಓ,ಸಂಚಾಲಕ ಪೂರನ್ ವರ್ಮಾ, ಕೆ. ಮೋಹನ್ ಕುಮಾರ್, ಮೋಹನ ಶೆಟ್ಟಿಗಾರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವಿ.ಪ. ಶಾಸಕ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿದರು. 

ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಸಿರಿ ಸಂಸ್ಥೆಯ ಎಂ.ಡಿ. ಜನಾರ್ದನ ಕೆ.ಎನ್., ಯೋಜನೆಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ್, ಡಾ. ಪ್ರದೀಪ್ ನಾವೂರು, ಪ್ರಕಾಶ್ ಶೆಟ್ಟಿ ನೊಚ್ಚ, ಆನಂದ ಸುವರ್ಣ, ತಿಮ್ಮಪ್ಪ ಗೌಡ ಬೆಳಾಲು, ಇಂಜಿನೀಯರ್ ಗಣೇಶ್ ಎಂ., ಯದುಪತಿ ಗೌಡ, ಸಂತೋಷ್ ಸಾಲಿಯಾನ್, ರವೀಂದ್ರ ಶೆಟ್ಟಿ ಬಳಂಜ, ಖಾಸಿಂ ಮಲ್ಲಿಗೆಮನೆ, ಪುಷ್ಪಾವತಿ ಆರ್. ಶೆಟ್ಟಿ, ಪ್ರಶಾಂತ್ ಜೈನ್, ಲಕ್ಷಣ ಸಫಲ್ಯ,  ಮಮತಾ ಶೆಟ್ಟಿ, ಸೀತಾರಾಮ ಬೆಳಾಲು, ರಾಜಶೇಖ್ಜರ ಅಜ್ರಿ, ಡಾ. ಶ್ರೀಧರ ಭಟ್, ಶ್ರೀಧರ ಕೆ.ವಿ., ಸತ್ಯನಾರಾಯಣ ಎರ್ಕಾಡಿತ್ತಾಯ ಮತ್ತು ಸಹಸ್ರಾರು ಭಕ್ತಾದಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದರು. ಹಾದಿಯಲ್ಲಿ ಪಾದಯಾತ್ರಿಗಳಿಗೆ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article