‘ಎಸ್‌ಐಟಿ ವರದಿ ಕೈ ಸೇರಿಲ್ಲ’: ಜಯಂತ್ ಟಿ.
Saturday, December 13, 2025
ಬೆಳ್ತಂಗಡಿ: ಎಸ್‌ಐಟಿಯು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ವರದಿ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದರೂ, ಅದು ಇನ್ನೂ ಕೈ ಸೇರಿಲ್ಲ ಎಂದು ಹೋರಾಟಗಾರ ಜಯಂತ್ ಟಿ.ಹೇಳಿದರು.
ಅವರು ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿ, ನಮಗೆ ಸಿಗದ ವರದಿ ಮಾಧ್ಯಮಕ್ಕೆ ಹೇಗೆ ಸಿಕ್ಕಿದೆ ಎಂಬುದು ತನಿಖೆ ಆಗಬೇಕು. ನ್ಯಾಯಾಲಯದಿಂದ ಆದೇಶ ಬಂದರೆ ಪದ್ಮಲತಾ ಪ್ರಕರಣವನ್ನು ತನಿಖೆ ನಡೆಸುವ ಕುರಿತು ಎಸ್‌ಐಟಿ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪಡೆದು ಎಸ್‌ಐಟಿಗೆ ಹಸ್ತಾಂತರಿಸಿ ಬಳಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು. ಅದರ ದಾಖಲೆಗಳು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.