ಯುವಕ ಆತ್ಮಹತ್ಯೆ
Saturday, December 13, 2025
ಮಂಗಳೂರು: ಯುವಕನೊಬ್ಬ ಮನೆ ಪಕ್ಕದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಪಡೀಲ್ ನ ಕೊಡಕ್ಕಲ್ ಎಂಬಲ್ಲಿ ನಡೆದಿದೆ. ಶ್ರವಣ್ ರಾಜ್ ಕಂಬ್ಳಿ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಖಾಸಗಿ ಸಂಸ್ಥೆಯೊಂದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಶುಕ್ರವಾರ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ. ಸಂಜೆ ವೇಳೆ ಮನೆಯಿಂದ ಹೊರಗೆ ಹೋಗಿದ್ದು, ರಾತ್ರಿಯಾದರೂ ವಾಪಾಸು ಬಂದಿರಲಿಲ್ಲ. ಬೆಳಗ್ಗೆ ಹುಡುಕಾಡುವಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.