ಮಹಿಳಾ ಕಾಂಗ್ರೆಸ್ ವತಿಯಿಂದ ಸೌಹಾರ್ದ ಕ್ರಿಸ್ಮಸ್ ಸಂಭ್ರಮಾಚಾರಣೆ

ಮಹಿಳಾ ಕಾಂಗ್ರೆಸ್ ವತಿಯಿಂದ ಸೌಹಾರ್ದ ಕ್ರಿಸ್ಮಸ್ ಸಂಭ್ರಮಾಚಾರಣೆ


ಮಂಗಳೂರು: ಮಂಗಳೂರು ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಧ್ಯಕ್ಷೆ ರೂಪಾ ಚೇತನ್ ನೇತೃತ್ವದಲ್ಲಿ ಆಶ್ರಮದ ವಿದ್ಯಾರ್ಥಿಗಳ ಜೊತೆ ಸೌಹಾರ್ದ ಕ್ರಿಸ್ಮಸ್ ಸಂಭ್ರಮಾಚಾರಣೆ ಕಾರ್ಯಕ್ರಮ ಮಲ್ಲಿಕಟ್ಟೆಯ ಇಂದಿರಾ ಪ್ರಿಯದರ್ಶಿನಿ ಜನ್ಮ ಶತಾಬ್ದಿ ಭವನದಲ್ಲಿ ಮಂಗಳವಾರ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಮಂಗಳೂರು ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ರಾಜ್ಯ ಮಹಿಳಾ ಕಾಂಗ್ರೆಸ್ ನ ಕಾರ್ಯದರ್ಶಿಗಳಾದ ಚಂದ್ರಕಲಾ ಡಿ ರಾವ್, ಮಂಜುಳಾ ನಾಯಕ್, ಗೀತಾ ಅತ್ತಾವರ, ದ.ಕ. ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಸದಸ್ಯೆ ಶಾಂತಲಾ ಗಟ್ಟಿ, ಮೂಡಾ ಸದಸ್ಯೆ ಸಬೀತಾ ಮಿಸ್ಕಿತ್, ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಕಲಾ ಜೋಗಿ, ಮೂಲ್ಕಿ ಬ್ಲಾಕ್ ನ ಅಧ್ಯಕ್ಷೆ ವಿಲ್ಮಾ ಡಿಕೋಸ್ತಾ, ಮಂಗಳೂರು ನಗರ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾ ಅಂದ್ರಾದೆ, ಮಾಜಿ ಮ.ನ.ಪಾ ಸದಸ್ಯರಾದ ನವೀನ್ ಡಿಸೋಜಾ, ಕೇಶವ್ ಮರೋಳಿ, ಚೇತನ್ ಕುಮಾರ್, ಝೀನತ್ ಸಂಶುದ್ದೀನ್, ತನ್ವೀರ್ ಶಾ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಮೀನಾ ಟೆಲ್ಲಿಸ್, ಕಿರಣಾ ಜೇಮ್ಸ್,  ಅವಿತಾ ನೊರೋನ್ಹ, ಡಿಂಪಲ್ ಫೆರ್ನಾಂಡಿಸ್, ಮೇರಿ ಶಾಂತಿಸ್, ರಮಣಿ ಉಮೇಶ್, ಭಾಗ್ಯವತಿ, ಚಂದ್ರಾವತಿ, ಲತಾಶ್ರೀ ಮಲ್ಲಿಕಾ ಜಯರಾಜ್, ಸಿಲಿಸ್ತಿನ್ ಕ್ರಾಸ್ತ, ಪದ್ಮಾವತಿ, ಗ್ರೇಸಿ ತಾವ್ರೋ, ಮರಿಯಾ ಲೋಬೊ, ಗೀತಾ ಪ್ರವೀಣ್, ವಾರ್ಡ್ ಅಧ್ಯಕ್ಷರಾದ ಜೇಮ್ಸ್ ಪ್ರವೀಣ್, ಟಿ.ಸಿ ಗಣೇಶ್, ಬ್ಲಾಕ್ ನ ಪರಿಶಿಷ್ಟ ಘಟಕದ ಅಧ್ಯಕ್ಷ ದಿನೇಶ್ ಬಲಿಪತೋಟ, ಕಿಸಾನ್ ಘಟಕದ ಅಧ್ಯಕ್ಷ ರಿತೇಶ್ ಶಕ್ತಿನಗರ, ಪ್ರಕಾಶ್ ಪಾತ್ರವೋ ಮತ್ತಿತರವರು ಉಪಸ್ಥಿತರಿದ್ದರು.

ಆನ್ನಾ ಪಾತ್ರವೋ ಕಾರ್ಯಕ್ರಮ ನಿರ್ವಹಿಸಿ, ನ್ಯಾನ್ಸಿ ನೋರೋನ್ಹ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article