ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟ: ಕೇಮಾರಿನ ರಶ್ಮಿತಾ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ
Wednesday, December 17, 2025
ಮೂಡುಬಿದಿರೆ: ದ.ಕ ಉಡುಪಿ ಮತ್ತು ಕೊಡಗು ಅಂತರ್ ಜಿಲ್ಲಾ ಮಟ್ಟದ 18ನೇ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೇಮಾರಿನ ರಶ್ಮಿತಾ ಶೆಟ್ಟಿ ಅವರು ತ್ರಿವಿಧ ಜಿಗಿತ ಪ್ರಥಮ, ಈಟಿ ಎಸೆತದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಹಲವಾರು ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಇವರು ಕಳೆದ ವರ್ಷವೂ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಿರುತ್ತಾರೆ.