ಮಹಿಳೆ ಆತ್ಮಹತ್ಯೆ
Saturday, December 13, 2025
ಮಂಜೇಶ್ವರ: ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಉಪ್ಪಳ ಸೋಂಕಾಲು ಎಂಬಲ್ಲಿ ನಡೆದಿದೆ.
ಸೋಂಕಾಲು ಕೊಡಂಗೆ ರಸ್ತೆಯ ಮೊಯ್ದೀನ್ ಸವಾದ್ ರವರ ಪತ್ನಿ ಫಾತಿಮ್ಮತ್ ನಬೀನಾ(25) ಮೃತಪಟ್ಟವರು.
ಐದು ತಿಂಗಳ ಮಗುವಿನ ತಾಯಿಯಾದ ಈಕೆಯು ಮನೆಯ ಬೆಡ್ ರೂಂ ನ ಕಿಟಿಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದ್ದು, ಮನೆಯವರು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ರೂ ಆಗಲೇ ಮೃತಪಟ್ಟಿದ್ದರು.
ಕೃತ್ಯಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.