ಯಂತ್ರಶ್ರೀ ನಾಟಿ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ
Saturday, December 13, 2025
ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ ) ಮೂಡುಬಿದಿರೆ ಕೃಷಿ ಕಾರ್ಯಕ್ರಮದಡಿ ಕಡಂದಲೆ ಪರಾಡಿಯ ಜಿಲ್ಲಾ ಕೃಷಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಕೆ. ಪಿ ಸಂತೋಷ್ ಕುಮಾರ್ ಶೆಟ್ಟಿ ಅವರ 12 ಎಕ್ರೆ ಭತ್ತದ ಗದ್ದೆಯಲ್ಲಿ ಯಂತ್ರದ ಮೂಲಕ ಭತ್ತದ ಸಸಿ ನಾಟಿಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುಕೇಶ್ ಪೂಜಾರಿ ಅವರು ಯಂತ್ರ ಶ್ರೀ ನಾಟಿಯಿಂದ ಇಳುವರಿಯಲ್ಲಿ ಹೆಚ್ಚಳ, ಅಧಿಕ ಹುಲ್ಲು ಹಾಗೂ ಸುಲಭ ನಾಟಿ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷ ಸ್ಥಾನ ವಹಿಸಿದ ಹೊಲದ ಮಾಲಕರಾಗಿರುವ ಪ್ರಗತಿ ಪರ ಕೃಷಿಕ ಕೆ ಪಿ ಸಂತೋಷ್ ಕುಮಾರ್ ಶೆಟ್ಟಿ ಅವರು ಮಾತನಾಡಿ ಒಟ್ಟು 40 ಎಕ್ರೆ ಭತ್ತದ ಕೃಷಿ ಮಾಡುತ್ತಿದ್ದು, ವಾರ್ಷಿಕ ಸುಮಾರು 1000 ಕೆಜಿ ಭತ್ತ ಬೆಳೆಯುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ರೈತರು, ಸೇವಾಪ್ರತಿನಿಧಿ ಗಳು ಭಾಗವಹಿಸಿದ್ದರು. ಯೋಜನೆಯ ಕೃಷಿ ಮೇಲ್ವಿಚಾರಕರಾದ ಲೋಕೇಶ್ ಪಿ. ಎಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.