"ಗ್ಯಾಲಕ್ಸಿ ಅಪಾರ್ಟ್‌ಮೆಂಟ್" ಲೋಕಾಪ೯ಣೆ

"ಗ್ಯಾಲಕ್ಸಿ ಅಪಾರ್ಟ್‌ಮೆಂಟ್" ಲೋಕಾಪ೯ಣೆ


ಮೂಡುಬಿದಿರೆ: ಇಲ್ಲಿನ ಮಹಾವೀರ ಕಾಲೇಜು ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಜಾವೆದ್ ಶೇಖ್ ಮಾಲಕತ್ವದ 'ಗ್ಯಾಲಕ್ಸಿ ಅಪಾರ್ಟ್‌ಮೆಂಟ್'ನ್ನು  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಭಾನುವಾರ ಲೋಕಾಪ೯ಣೆಗೊಳಿಸಿದರು.  

ಕಾಯ೯ಕ್ರಮಕ್ಕೆ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಭೇಟಿ ನೀಡಿ ಶುಭ ಹಾರೈಸಿದರು.


ಆಳ್ವಾಸ್ ನ ಟ್ರಸ್ಟಿ ವಿವೇಕ್ ಆಳ್ವ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿದರು. ಮಾಜಿ ಸಚಿವ ಬಿ‌.ರಮಾನಾಥ ರೈ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಚಿತ್ರನಟ ಭೋಜರಾಜ್ ವಾಮಂಜೂರು,ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಕಾಯ೯ಕ್ರಮಕ್ಕೆ ಶುಭ ಹಾರೈಸಿದರು. 


ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್,ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯರಾದ  ರೂಪಾ ಸಂತೋಷ್ ಶೆಟ್ಟಿ,ಪ್ರಸಾದ್ ಕುಮಾರ್,ಸುರೇಶ್ ಕೋಟ್ಯಾನ್,  ಮೂಡಾ ಸದಸ್ಯ ಶೇಖರ್ ಬೊಳ್ಳಿ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ಪಂಚರತ್ನ ತಿಮ್ಮಯ್ಯ ಶೆಟ್ಟಿ, ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ, ಚಿತ್ರ ನಿರ್ದೇಶಕ ಸುರೇಶ್ ಅಂಚನ್, ನಾಸಿರ್ ಸಾಮಣಿಗೆ, ಕೆ.ಪಿ‌‌.ಜಗದೀಶ್ ಅಧಿಕಾರಿ, ಮತ್ತಿತರರು ಭಾಗವಹಿಸಿದ್ದರು.

ವಿಶ್ವನಾಥ ಶೆಟ್ಟಿ ,ಅಝ್ವೀರ್, ಮುಜೀಬ್,ರಾಜೇಶ್ ಕೋಟೆಗಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

ಸಂಸ್ಥೆಯ ಮುಖ್ಯಸ್ಥರಾದ ಜಾವೆದ್ ಶೇಖ್ ಹಾಗೂ ಡಾ.ಪರ್ವೀನ್ ಜಾವೆದ್ ಶೇಖ್ ಅವರು ಭಾಗವಹಿಸಿದವರನ್ನು ಸ್ವಾಗತಿಸಿ,ಸರ್ವರ ಸಹಕಾರ ಕೋರಿ ವಂದಿಸಿದರು.ಶಾಹಿಲ್ ಬೆದ್ರ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article