ಪತಿ, ಪತ್ನಿ, ಮಗ ನಿಗೂಢ ನಾಪತ್ತೆ
ಬಂಟ್ವಾಳ: ಪತಿ, ಪತ್ನಿ ಹಾಗೂ ಮಗು ಸಹಿತ ಮೂವರು ನಿಗೂಢವಾಗಿ ನಾಪತ್ತೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುನಡುಗೋಡು ಗ್ರಾಮದಲ್ಲಿ ನಡೆದಿದೆ.
ಮೂಲತಃ ತಾಲೂಕಿನ ನಾವೂರ ಗ್ರಾಮದ ನಿವಾಸಿಗಳಾದ ಸದಾಶಿವ ಇವರ ಪತ್ನಿ ಪ್ರತಿಭಾ ಹಾಗೂ ಮಗ 9 ರ ಹರೆಯದ ರಿತ್ವಿಕ್ ನಾಪತ್ತೆಯಾದವರಾಗಿದ್ದಾರೆ.
ಡಿ.17 ರಂದು ಇವರು, ಡಿ.25 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈವರೆಗೆ ಇವರ ಸುಳಿವು ಪತ್ತೆಯಾಗಿಲ್ಲ ಎಂಬ ತಿಳಿದು ಬಂದಿದೆ.
ಸದಾಶಿವ ದಂಪತಿಗೆ ತಲಾ ಒಂದು ಹೆಣ್ಣು ಮತ್ತು ಗಂಡು ಮಗುವಿದ್ದು, ದಂಪತಿ ಹಾಗೂ ಮಕ್ಕಳು ಸೇರಿ ನಾಲ್ವರು ಡಿ.16 ರಂದು ನಾವೂರಿನ ಮನೆಯಿಂದ ಮೂಡನಡುಗೋಡು ಗ್ರಾಮದ ಶಾಂತಿಗುರಿಯಲ್ಲಿರುವ ಹತ್ತಿರದ ಸಂಬಂಧಿ ಧರ್ಣಪ್ಪ ಪೂಜಾರಿ ಅವರ ಮನೆಗೆ ಬಂದಿದ್ದರು.
ಅಂದು ಅಲ್ಲೇ ಉಳಿದಿದ್ದ ಸದಾಶಿವ ದಂಪತಿ ತನ್ನ ಪುತ್ರಿಯನ್ನು ಅಲ್ಲೇಬಿಟ್ಟು, ಮುಂಜಾನೆ ವೇಳೆಗೆ ಮಗ ರಿತ್ವಿಕ್ ನೊಂದಿಗೆ ಮೂವರು ಕಾಣೆಯಾಗಿದ್ದಾರೆ. ಇವರ ಪುತ್ರಿ ಅತಂತ್ರವಾಗಿದ್ದು, ಸ್ಥಳೀಯವಾಗಿ ನಾಪತ್ತೆಯಾದ ಉಹಾಪೋಹಗಳು ಹಬ್ಬಿದೆ.
ಈ ಬಗ್ಗೆ ಧರ್ಣಪ್ಪ ಪೂಜಾರಿ ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದವರು ತುಳು, ಕನ್ನಡ ಭಾಷೆ ತಮಾತನಾಡುತ್ತಿದ್ದು ಇವರ ಗುರುತು ಪತ್ತೆಯಾದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.