ಮಂಗಳೂರು: ಪಿಲಿಕುಳ ರೆಸಾರ್ಟ್ ಉದ್ಘಾಟನೆ ಬಳಿಕ ಅಲ್ಲಿನ ನೂತನ ಅಂತಾರಾಷ್ಟ್ರೀಯ ದರ್ಜೆಯ ಗಾಲ್ಫ್‌ಕೋರ್ಸ್‌ಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಗಾಲ್ಫ್ ಆಡಿ ಗಮನ ಸೆಳೆದರು.
ಸಚಿವರಾದ ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್, ಎಂಎಲ್ಸಿ ಐವನ್ ಡಿಸೋಜ ಮತ್ತಿತರರು ಇದ್ದರು.