ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘ ನಿ.ದ ನೂತನ ಅಧ್ಯಕ್ಷರಾಗಿ ಮೇಘರಾಜ್ ಜೈನ್ ಅವಿರೋಧವಾಗಿ ಆಯ್ಕೆ
ಮೇಘರಾಜ್ ಜೈನ್ ಅವರು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇದರ ಮೆನೇಜಿಂಗ್ ಟ್ರಸ್ಟೀಯೂ ಆಗಿರುತ್ತಾರೆ. ಉಪಾಧ್ಯಕ್ಷರಾಗಿ ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರತ್ನಾಕರ ಶೆಟ್ಟಿ ಇವರು ಆಯ್ಕೆಗೊಂಡಿದ್ದಾರೆ.
ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘ ನಿ., ಇದರ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ 16 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಎಂ.ಎನ್. ರಾಜೇಂದ್ರ ಕುಮಾರ್, ವಿನಯ ಕುಮಾರ್ ಸೂರಿಂಜೆ, ರತ್ನಾಕರ ಶೆಟ್ಟಿ, ರಾಘವ ಶೆಟ್ಟಿ, ಮೋನಪ್ಪ ಶೆಟ್ಟಿ, ಸುನೀಲ್ ಕುಮಾರ್, ನಜೀರ್ ಹುಸೈನ್, ಎಂ. ಮಹೇಶ್ ಹೆಗ್ಡೆ, ಎಸ್. ರಾಜು ಪೂಜಾರಿ, ಎಂ. ವಾದಿರಾಜ ಶೆಟ್ಟಿ, ಮೇಘರಾಜ್ ಜೈನ್, ಹಿಂದುಳಿದ ‘ಅ’ ವರ್ಗದಿಂದ ಭಾಸ್ಕರ್ ಎಸ್. ಕೋಟ್ಯಾನ್, ಪರಿಶಿಷ್ಟ ಜಾತಿ ವರ್ಗದಿಂದ ಜಗದೀಶ್ಚಂದ್ರ ಎಸ್., ಹಿಂದುಳಿದ ‘ಬ’ ವರ್ಗದಿಂದ ಗುಲ್ಜರ್ ಹುಸೈನ್, ಮಹಿಳಾ ಮೀಸಲು ಕ್ಷೇತ್ರದಿಂದ ಸಾವಿತ್ರಿ ರೈ, ಪೂರ್ಣಿಮಾ ಶೆಟ್ಟಿ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
