ಸಮಾಜದಲ್ಲಿ ಬದಲಾವಣೆ ತರಲು ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಮಾತ್ರ ಸಾಧ್ಯ: ಪಿಜಿಆರ್ ಸಿಂಧ್ಯ

ಸಮಾಜದಲ್ಲಿ ಬದಲಾವಣೆ ತರಲು ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಮಾತ್ರ ಸಾಧ್ಯ: ಪಿಜಿಆರ್ ಸಿಂಧ್ಯ


ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ  ಜ. 22ರಿಂದ 26ವರೆಗೆ ನಡೆದ ಕನ್ನಡ ಭವನದಲ್ಲಿ ನಡೆದ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ 2026 ರ ಸಮಾರೋಪ ಸಮಾರಂಭವು ಸೋಮವಾರ ನಡೆಯಿತು. 

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯದ ಮುಖ್ಯ ಆಯುಕ್ತರಾದ  ಪಿ.ಜಿ ಆರ್ ಸಿಂಧ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸೇವೆಯೆಂಬುದು ಫೋಟೋಗಳಿಗೆ ಸೀಮಿತವಾಗದೆ ಇನ್ನೊಬ್ಬರಿಗೆ ನೆರವಾಗಬೇಕು, ಬರಿ ಘೋಷ ವಾಕ್ಯದಿಂದ ಭಾರತ ವಿಕಸಿತಗೊಳ್ಳಲು ಸಾಧ್ಯವಿಲ್ಲ ಸಮಾಜದಲ್ಲಿ ಬದಲಾವಣೆ ತರಲು ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಮಾತ್ರ ಸಾಧ್ಯ ಎಂದು  ಹೇಳಿದರು.

ಭಾರತ್ ಸ್ಕೌಟ್ ಮತ್ತು ಗೈಡ್  ರಾಷ್ಟ್ರೀಯ ಸಂಸ್ಥೆಯ ಮತ್ತು ಶಿಬಿರದ ನಾಯಕರಾಗಿರುವ  ಬಬ್ಲು ಗೋಸ್ವಾಮಿ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್, ದ. ಕ ಜಿಲ್ಲಾ ಸಂಸ್ಥೆಯ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ, ಇಪಿಆರ್ ಐ ಸಂಸ್ಥೆಯ ಸಂಯೋಜಕ  ಚೇತನ್ ಕುಮಾರ್, ಮಹೇಶ್, ಶಿಬಿರ ಸಹಾಯಕರಾದ ಬೆಂಗಳೂರು ಉತ್ತರದ ಜನಾರ್ಧನ ಚಕ್ರವರ್ತಿ,  ರಾಷ್ಟ್ರೀಯ ತರಬೇತುದಾರರಾದ ನಾರಾಯಣನ್,  ಹಾಸನ ಜಿಲ್ಲಾ ಸಹಾಯಕ ಆಯುಕ್ತ ಡಾ.ನಾರಾಯಣ ಜಿ ಡಿ , ದ. ಕ ಜಿಲ್ಲೆಯ ಕು.ದೀಪಿಕಾ, ಕು.ಅಪೇಕ್ಷಾ ಭಂಡಾರಿ,ವಿಶ್ವತ್,ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ.,

ದಾವಣಗೆರೆಯ ನವೀನ್, ಚಿಕ್ಕಮಗಳೂರಿನ ಜಿ,ರಕ್ಷಿತ್ ,  ಶ್ರೀಕಾಂತ್ ಶರ್ಮ ರಾಜಸ್ಥಾನ, ಎ.ಎಸ್ ಭಾಟಿ ಹರಿಯಾಣ, ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ಉಪಸ್ಥಿತರಿದ್ದರು.

ರಾಷ್ಟ್ರದ 9 ರಾಜ್ಯಗಳಾದ ಕರ್ನಾಟಕದಿಂದ 237,ಈಸ್ಟನ್ ರೈಲ್ವೆಯಿಂದ 18, ಹರಿಯಾಣ 25, KVS 10, NVS 10, ಮಧ್ಯಪ್ರದೇಶ 16, ತಮಿಳುನಾಡು 10, ನಾರ್ತ್,ಸೆಂಟ್ರಲ್ ರೈಲ್ವೆ 13, ರಾಜಸ್ಥಾನ 06 ಒಟ್ಟು 345 ವಿದ್ಯಾರ್ಥಿಗಳು,15 ಶಿಬಿರ ಸಹಾಯಕರುಗಳು,12 ರೋವರ್ಸ್ ಸ್ವಯಂ ಸೇವಕರು 372 ಮಂದಿ ಭಾಗವಹಿಸಿರುತ್ತಾರೆ.

ವಿವಿಧ ಸ್ವರ್ಧೆಯಲ್ಲಿ ವಿಜೇತರಾದ ರಾಜ್ಯಕ್ಕೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article