ಫೆ.15 ರಂದು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ , ತಾಯಿನಾಡು: ಗೋಳಿಹೊಳೆಯಲ್ಲಿ ಮಹಾ ಶಿವರಾತ್ರಿ ಆಚರಣೆ

ಫೆ.15 ರಂದು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ , ತಾಯಿನಾಡು: ಗೋಳಿಹೊಳೆಯಲ್ಲಿ ಮಹಾ ಶಿವರಾತ್ರಿ ಆಚರಣೆ


ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಸಮೀಪದ ತಾಯಿನಾಡು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಫೆ.15 ರಂದು ಮಹಾ ಶಿವರಾತ್ರಿ ಆಚರಣೆ ನಡೆಯಲಿದೆ.

ಅಂದು ಬೆಳಗ್ಗೆ 8 ಗಂಟೆಗೆ ಶ್ರೀ ಗಣಪತಿಗೆ ಷಣ್ಣಾರಿಕೇಳ ಗಣಯಾಗ, ಶ್ರೀ ದೇವಿಗೆ ದುರ್ಗಾ ಹೋಮ, ಶ್ರೀ ವಿಷ್ಣುದೇವರಿಗೆ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ತೀರ್ಥ- ಪ್ರಸಾದ ವಿತರಣೆ, ಬಳಿಕ "ಮಹಾ ಅನ್ನ ಸಂತರ್ಪಣೆ"  ಕಾರ್ಯಕ್ರಮ ನಡೆಯಲಿದೆ.

ಸಂಜೆ ಗಂಟೆ 6.30 ರಿಂದ ಶ್ರೀ ಸಿದ್ಧಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಮಹಾಪೂಜೆ , ಪ್ರಸಾದ ವಿತರಣೆ. 

ರಾತ್ರಿ ಗಂಟೆ 10 ರಿಂದ ಮಧ್ಯ ರಾತ್ರಿಯ ತನಕ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ" ನಡೆಯಲಿದೆ ಎಂದು ಜಯರಾಮ್ ಪೂಜಾರಿ ಕುಟುಂಬಸ್ಥರ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article