9 ಕೋಟಿ 90 ಲಕ್ಷ ಯೋಜನಾ ವೆಚ್ಚದಲ್ಲಿ ನೀರ್ಕೆರೆ ಸೇತುವೆ ಕಾಮಗಾರಿಗೆ ಶಾಸಕ ಕೋಟ್ಯಾನ್ ಶಿಲಾನ್ಯಾಸ
Wednesday, February 11, 2026
ಮೂಡುಬಿದಿರೆ: ಕಳೆದ ಹಲವು ಸಮಯಗಳಿಂದ ದುರಸ್ಥಿಗಾಗಿ ಕಾಯುತಿದ್ದ ತೆಂಕಮಿಜಾರು ಗ್ರಾಪಂ ವ್ಯಾಪ್ತಿಯ ನೀರ್ಕೆರೆ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಶಿಲಾನ್ಯಾಸಗೈದರು.
40 ಮೀಟರ್ ಉದ್ದ,10.5 ಮೀ ಅಗಲದ ಈ ಸೇತುವೆಯು 9 ಕೋಟಿ 90 ಲಕ್ಷ ಯೋಜನಾ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.
ತೆಂಕಮಿಜಾರು ಗ್ರಾ.ಪಂನ ನಿರ್ಗಮನ ಅಧ್ಯಕ್ಷೆ ಶಾಲಿನಿ ಕೆ.ಸಾಲ್ಯಾನ್, ಸದಸ್ಯರಾದ ದಿನೇಶ್ ಕುಮಾರ್, ದಿನೇಶ್ ಗೌಡ, ಮಹೇಶ್, ಜಯಲಕ್ಷ್ಮೀ ಶೆಟ್ಟಿಗಾರ್, ವಿದ್ಯಾನಂದ ಶೆಟ್ಟಿ, ಮಾಜಿ ಅಧ್ಯಕ್ಷೆ ರುಕ್ಮಿಣಿ, ಮಾಜಿ ಸದಸ್ಯ ವಾಸು ಶೆಟ್ಟಿ, ಹಿರಿಯರಾದ ಅಜಿತ್ ರಾಜ್ ಜೈನ್, ಕರುಣಾಕರ ಸಾಲ್ಯಾನ್, ರಾಮಚಂದ್ರ ಭಟ್, ಗುತ್ತಿಗೆದಾರ ಮುಗ್ರೋಡಿ ಕನ್ಟ್ರಕ್ಷನ್ ನ ಪ್ರತಿನಿಧಿಗಳು ಉಪಸ್ಥಿತರಿದ್ದರು.
