ಪ್ರತಿರೋಧ, ನಿರಾಕರಣೆಯ ಮೂಲಕ ಸೆಣಸಾಟದ ಹೋರಾಟ ರೂಪುಗೊಂಡಾಗ ಮಾತ್ರವೇ ಕಾರ್ಮಿಕ ವರ್ಗದ ವಿಮೋಚನೆ ಸಾಧ್ಯ: ಕೆ.ಎನ್. ಉಮೇಶ್

ಪ್ರತಿರೋಧ, ನಿರಾಕರಣೆಯ ಮೂಲಕ ಸೆಣಸಾಟದ ಹೋರಾಟ ರೂಪುಗೊಂಡಾಗ ಮಾತ್ರವೇ ಕಾರ್ಮಿಕ ವರ್ಗದ ವಿಮೋಚನೆ ಸಾಧ್ಯ: ಕೆ.ಎನ್. ಉಮೇಶ್


ಮಂಗಳೂರು: ದೇಶದ ಆಳುವ ವರ್ಗಗಳು ತಮ್ಮ‌ ಹಿತಾಸಕ್ತಿಗಳನ್ನು ಕಾಪಾಡಲು ದುಡಿಯುವ ವರ್ಗದ ಹಕ್ಕುಗಳನ್ನು ಕಿತ್ತುಕೊಂಡು ಮತ್ತೆ ಗುಲಾಮಗಿರಿಯತ್ತ ಕೊಂಡೊಯ್ಯಲು ಹರಸಾಹಸ ಪಡುತ್ತಿದೆ.ಆದರೆ ದೇಶದ ಕಾರ್ಮಿಕ ವರ್ಗವಂತೂ ಆಳುವ ವರ್ಗದ ಎಲ್ಲಾ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರಬಲ ಹೋರಾಟದ ಮೂಲಕ ಹಿಮ್ಮೆಟ್ಟಿಸಿ ಕಾರ್ಮಿಕ ಕಾನೂನುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದೆ.ಆದರೆ ಇಂದು ಸಾಮ್ರಾಜ್ಯಶಾಹಿಗಳ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ದೇಶದ ಆಳುವ ವರ್ಗಗಳು ಕಾರ್ಮಿಕ ಕಾನೂನುಗಳನ್ನು ಇಲ್ಲವಾಗಿಸಿರುವುದು ಮಾತ್ರವಲ್ಲದೆ ದೇಶದ ಸಂಪತ್ತುಗಳನ್ನು ಕೂಡ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದಿದೆ. ಇಂತಹ ಸಂಕಷ್ಟದ ಕಾಲಘಟ್ಟದಲ್ಲಿ ಕಾರ್ಮಿಕ ವರ್ಗ ಪ್ರತಿರೋಧ ಹಾಗೂ ನಿರಾಕರಣೆಯ ಮೂಲಕ ಆಳುವ ವರ್ಗದ ವಿರುದ್ಧ ಸೆಣಸಾಟದ ಹೋರಾಟ ರೂಪುಗೊಂಡಾಗ ಮಾತ್ರವೇ ಕಾರ್ಮಿಕ ವರ್ಗದ ವಿಮೋಚನೆ ಸಾಧ್ಯವೆಂದು CITU ರಾಷ್ಟ್ರೀಯ ನಾಯಕರಾದ ಕೆ ಎನ್ ಉಮೇಶ್ ಅವರು ಜಿಲ್ಲೆಯ ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.


ಅವರು CITU ಕರ್ನಾಟಕ ರಾಜ್ಯ ಸಮಿತಿಯ ಆಶ್ರಯದಲ್ಲಿ  ಮಂಗಳೂರಿನಲ್ಲಿ ಜರುಗಿದ ಹಾಸನ ವಿಭಾಗ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸುತ್ತಾ ಈ ಮಾತುಗಳನ್ನು ಹೇಳಿದರು.

ನವ ಉದಾರವಾದದ ಬಿಕ್ಕಟ್ಟು ಜಗತ್ತಿನೆಲ್ಲೆಡೆ ತೀವ್ರಗೊಳ್ಳುತ್ತಿದೆ. ಅದರ ಪರಿಣಾಮವಾಗಿ ಯುದ್ಧದ ಭೀತಿ,ವಿಪರೀತ ಬೆಲೆಯೇರಿಕೆಗಳು ಜನಸಾಮಾನ್ಯರ ಬದುಕನ್ನು ಸರ್ವನಾಶ ಮಾಡುತ್ತಿದೆ ಎಂದು ಹೇಳಿದರು

ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ಜರುಗಿದ CITU ಅಖಿಲ ಭಾರತ ಸಮ್ಮೇಳನದ ವರದಿ ಹಾಗೂ ಸಮ್ಮೇಳನ ಕೈಗೊಂಡ ಅತ್ಯಂತ ಮಹತ್ವದ ತೀರ್ಮಾನಗಳನ್ನು ವಿವರಿಸುತ್ತಾ ಈ ಮಾತುಗಳನ್ನು ಹೇಳಿದರು.

ಹಾಸನದಲ್ಲಿ ಜರುಗಿದ CITU ಕರ್ನಾಟಕ ರಾಜ್ಯ ಸಮ್ಮೇಳನದ ವರದಿಯನ್ನು CITU ರಾಜ್ಯ ಕಾರ್ಯದರ್ಶಿ ಗಳಾದ ಕೆ ಮಹಾಂತೇಶ್ ರವರು ವಿವರಿಸುತ್ತಾ, ರಾಜ್ಯದ ಸಿದ್ದರಾಮಯ್ಯ  ಸರಕಾರವೂ ಕೂಡ ಸಾಲರಾಮಯ್ಯ ಸರಕಾರವಾಗಿ ಪರಿವರ್ತನೆಗೊಂಡಿದೆ. ಕಾರ್ಮಿಕ ಸಂಹಿತೆಗಳ ಜಾರಿಗೆ ಅತ್ಯಂತ ಕಠಿಣವಾದ ನಿಯಮಾವಳಿಗಳನ್ನು‌ ರೂಪಿಸಿ ಕಾರ್ಮಿಕ ವರ್ಗಕ್ಕೆ ದ್ರೋಹ ಎಸಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು CITU ದ.ಕ.ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ರವರು ವಹಿಸಿದ್ದರು. ವೇದಿಕೆಯಲ್ಲಿ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್,CITU ರಾಜ್ಯ ನಾಯಕರಾದ ಸುರೇಶ್ ಕಲ್ಲಾಗಾರ,ಚಂದ್ರಶೇಖರ ವಿ ಕುಂದಾಪುರ ರವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article