ಲೇಖಕಿ ರಿಶೆಲ್ ಫೆರ್ನಾಂಡಿಸ್ಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಭಾರತದ ಉದಯೋನ್ಮುಖ ಧ್ವನಿ ಗೌರವ

ಲೇಖಕಿ ರಿಶೆಲ್ ಫೆರ್ನಾಂಡಿಸ್ಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಭಾರತದ ಉದಯೋನ್ಮುಖ ಧ್ವನಿ ಗೌರವ


ಮೂಡುಬಿದಿರೆ: ಪ್ರಮುಖ ಯುವ ಲೇಖಕಿ ಮತ್ತು ವಾಗ್ಮಿ, ಎಬಿವಿಪಿ ಕಾರ್ಯಕರ್ತೆ ಮತ್ತು ಎಲ್ಎಲ್ ಬಿ ಅಂತಿಮ ವರ್ಷದ ವಿದ್ಯಾರ್ಥಿನಿ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರನ್ನು ಇಂಕಿ ಪೆಹಚಾನ್ ಫೌಂಡೇಶನ್ ರಾಷ್ಟ್ರೀಯ ಸಂಸ್ಥೆ ಬೆಂಗಳೂರಿನಲ್ಲಿ ನಡೆಯುವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಭಾರತ ದೇಶದ ಉದಯೋನ್ಮುಖ ಧ್ವನಿ ಎಂದು ಗುರುತಿಸಲಿದೆ. 

ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ 5 ಪುಸ್ತಕಗಳನ್ನು ಬರೆದಿದ್ದಾರೆ. 

ಪ್ರಧಾನ ಮಂತ್ರಿ ಕಚೇರಿ, ಭಾರತದ ರಾಷ್ಟ್ರಪತಿ ಮತ್ತು ಇತರ ಸಚಿವಾಲಯಗಳಿಂದ ಮೆಚ್ಚುಗೆ ಪಡೆದ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. 200 ಮಾಧ್ಯಮ ವೇದಿಕೆಗಳು ಅವರನ್ನು ಆಧುನಿಕ ಭಾರತವನ್ನು ರೂಪಿಸುವ ಧ್ವನಿ ಎಂದು ಪರಿಗಣಿಸಿವೆ. ಅವರು ಶಿಕ್ಷಕರಾದ ಶ್ರೀ ರೊನಾಲ್ಡ್ ಮತ್ತು ಶ್ರೀಮತಿ ನ್ಯಾನ್ಸಿ ಅವರ ಪುತ್ರಿ. ಮಹಿಳಾ ದಿನದಂದು ಬೆಂಗಳೂರಿನ ಜುರಿ ವೈಟ್‌ಫೀಲ್ಡ್‌ನಲ್ಲಿ ಅವರನ್ನು ಖ್ಯಾತ ನಟಿ ಶ್ರೀಮತಿ ಸುಧಾ ಚಂದ್ರನ್ ಮತ್ತು ಶ್ರೀಮತಿ ಮಂಜಿರಿ ಗುಪ್ತಾ ಅವರು ಪ್ರಶಸ್ತಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article