ಉಚ್ಚಂಗಿ ಮಾರಿಯಮ್ಮ ದೇವಸ್ಥಾನ ಬ್ರಹ್ಮಕಲಶ: ಧಾರ್ಮಿಕ ಸಭೆ

ಉಚ್ಚಂಗಿ ಮಾರಿಯಮ್ಮ ದೇವಸ್ಥಾನ ಬ್ರಹ್ಮಕಲಶ: ಧಾರ್ಮಿಕ ಸಭೆ


ಮೂಡುಬಿದಿರೆ: ಮಾರಿಯಮ್ಮ ಮನಸ್ಸಿಗೆ ಶಕ್ತಿ ತುಂಬುವ ದೇವರು. ಕರಾವಳಿಯು ಅತೀಂದ್ರಿಯ ಶಕ್ತಿಗಳ ತಾಣವಾಗಿದ್ದು ಇಲ್ಲಿ ನಾವು ದೈವಶಕ್ತಿಯ ನೆರಳಿನಲ್ಲಿ ಬದುಕುತ್ತಿರುವುದರಿಂದ ನಮಗೆ ದೈವೀ ಶಕ್ತಿಯ ಅನುಗ್ರಹ ಬೇಕು  ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ಕೋಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಭಾನುವಾರ ನಡೆದ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ದೀಪ ಬೆಳಿಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಪುರಸಭೆ ಅನುದಾನದಿಂದ 30 ಲಕ್ಷ ವೆಚ್ಚದಲ್ಲಿ ಸಭಾಭವನ ನಿರ್ಮಿಸಲು ಸಹಕರಿಸಿದ ರೂಪಾ ಸಂತೋಷ್ ಶೆಟ್ಟಿ, ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಪುರಸಭೆ ಅನುದಾನದಿಂದ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಸಹಕರಿಸಿದ ಪುರಸಭಾ ಸದಸ್ಯ ಕೊರಗಪ್ಪ, ಸುಮಾರು 3 ಲಕ್ಷ ವೆಚ್ಚದಲ್ಲಿ ಸ್ವಾಗತಗೋಪುರವನ್ನು ನಿರ್ಮಿಸಿಕೊಟ್ಟ ದಾನಿ ನಾಗೇಶ್, ಹಾಸುಗಲ್ಲು ಕಾಮಗಾರಿ ನಿರ್ವಹಿಸಿದ ಉದಯ್ ಕುಮಾರ್ ಹಾಗೂ ಪಂಜುರ್ಲಿ ದೈವದ ಕಟ್ಟೆಗೆ ಸ್ಟೀಲ್ ತಡೆ ಬೇಲಿ ನಿರ್ಮಿಸಿಕೊಟ್ಟ ಕೆ. ಆರ್ ಪರಶವನ್ ಅವರನ್ನು ಸನ್ಮಾನಿಸಲಾಯಿತು. 

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಉದ್ಯಮಿ ಶ್ರೀಪತಿ ಭಟ್, ಪೊನ್ನೆಚಾರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರು ಅಶೋಕ್ ಕಾಮಾತ್, ವೈಬ್ರೆಂಟ್ ಪಯು ಕಾಲೇಜು ಪ್ರಾಂಶುಪಾಲ ಡಾ. ಎಸ್. ಎನ್ ವೆಂಕಟೇಶ ನಾಯಕ್ ಗುತ್ತಿಗೆದಾರ ಗಿರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಾಕ್ಷರಾದ ತಿಮ್ಮಯ್ಯ ಶೆಟ್ಟಿ, ರವಿಪ್ರಸಾದ್ ಉಪಾಧ್ಯಾಯ, ಕೋಶಾಧಿಕಾರಿ ಸಂತೋಶ್ ಶೆಟ್ಟಿ, ಆಡಳಿತ ಮಂಡಳಿಯ ಉಪಾಧ್ಯಾಕ್ಷ ಸಂತೋಷ್, ಕಾರ‍್ಯದರ್ಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನ ಕಾರ‍್ಯದರ್ಶಿ ಬಿ. ಸೀತರಾಮ ಆಚಾರ್ಯ ಸ್ವಾಗತಿಸಿದರು. ಶಿವಪ್ರಸಾದ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

ನಂತರ ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿ ಸಂಯೋಜನೆಯಲ್ಲಿ ಯಕ್ಷ-ಗಾನ- ಹಾಸ್ಯ-ವೈಭವ ಹಾಗೂ ಪಿಂಗಾರ ಕಲಾವಿದರು ಬೆದ್ರ ತಂಡದಿಂದ ಓಂಕಾರ ನಾಟಕ ಪ್ರದಶ೯ನಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article