ಪಡುಕೊಣಾಜೆ ದೊಡ್ಡಮನೆ ಗುತ್ತು ಶಿಶುಪಾಲ ಹೆಗ್ಡೆ ನಿಧನ
Tuesday, March 24, 2026
ಮೂಡುಬಿದಿರೆ: ಪಡುಕೊಣಾಜೆ ದೂಡ್ಡಮನೆ ಗುತ್ತು ಶಿಶುಪಾಲ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು.
ಕೋಟೆಬಾಗಿಲು, ಮೂಡುಬಿದಿರೆ, ಮರಿಯಾಡಿ ಪಡುಕೊಣಾಜೆ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.
ಮೇಕಾರು ಶ್ರೀ ಧೂಮ್ರ ಧೂಮಾವತಿ ಕ್ಷೇತ್ರದ ಒಂದನೇ ಗುರಿಕಾರ ಮನೆತನ ಅವರದಾಗಿತ್ತು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ.