ಮೂಡುಬಿದಿರೆ: ಶಿವರಾಮ ಕಾರಂತ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ
Tuesday, March 24, 2026
ಮೂಡುಬಿದಿರೆ: ಪ್ರತೀ ವರ್ಷ ನೀಡಲಾಗುವ ಶಿವರಾಮ ಕಾರಂತ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಶಿವರಾಮ ಕಾರಂತ ಪ್ರತಿಷ್ಠಾನ ಆಹ್ವಾನಿಸಿದೆ.
2021ರಿಂದ 2026ರವರೆಗೆ ಪ್ರಥಮ ಮುದ್ರಿತಗೊಂಡ ಕೃತಿಗಳಲ್ಲಿ ಉತ್ತಮವಾದ ಮೂರು ಕೃತಿಗಳನ್ನು ಆಯ್ಕೆ ಮಾಡಿ, ಪ್ರತಿಯೊಬ್ಬ ಲೇಖಕರಿಗೆ ₹10,000 ಗೌರವ ಸಂಭಾವನೆಯೊಂದಿಗೆ ಪುರಸ್ಕಾರ ನೀಡಲಾಗುತ್ತದೆ. ಈ ಪುರಸ್ಕಾರವನ್ನು ಪ್ರತಿಷ್ಠಾನವು ಕಳೆದ ಹಲವು ವರ್ಷಗಳಿಂದ ಸಾಹಿತ್ಯ ಕ್ಷೇತ್ರದ ಉತ್ತೇಜನಕ್ಕಾಗಿ ನೀಡುತ್ತಾ ಬಂದಿದೆ.
ಆಸಕ್ತರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಮೇ 31ರೊಳಗೆ ಶಿವರಾಮ ಕಾರಂತ ಪ್ರತಿಷ್ಠಾನ, ಕನ್ನಡ ಭವನ, ಮೂಡುಬಿದಿರೆ – 574227 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9743533105 ಅನ್ನು ಸಂಪರ್ಕಿಸಬಹುದು.
ಉತ್ತಮ ಕೃತಿಗಳನ್ನು ಯಾರಾದರೂ ಶಿಫಾರಸು ಮಾಡಬಹುದಾಗಿದೆ. ಈಗಾಗಲೇ ಕೃತಿಗಳನ್ನು ಕಳುಹಿಸಿದವರು ಪುನಃ ಕಳುಹಿಸುವ ಅಗತ್ಯವಿಲ್ಲ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.