ವಿಶ್ವ ಜಲ ದಿನ: ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ ಕುರಿತು ಕಾಯಾ೯ಗಾರ

ವಿಶ್ವ ಜಲ ದಿನ: ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ ಕುರಿತು ಕಾಯಾ೯ಗಾರ


ಮೂಡುಬಿದಿರೆ: ಜಲ ಸಂರಕ್ಷಣೆ ಮಾಡುವುದು ಇಂದಿನ ದಿನಗಳಲ್ಲಿ  ಅತೀ ಅವಶ್ಯಕ ಎಂದು ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ನಿರ್ಗಮನ ಪುರಸಭಾ ಸದಸ್ಯ ಪಿ.ಕೆ. ಥೋಮಸ್ ಹೇಳಿದರು. 

ಅವರು ವಿಶ್ವ ಜಲ ದಿನದ ಅಂಗವಾಗಿ ಮೂಡುಬಿದಿರೆ ಪುರಸಭೆ ಹಾಗೂ ಸಿಡಿಡಿ ಇಂಡಿಯಾ ಸರ್ಕಾರೇತರ ಸಂಸ್ಥೆಯ ಸಹಭಾಗಿತ್ವದಲ್ಲಿ ಕಟ್ಟಡ ಇಂಜಿನಿಯರಿಂಗ್ ಕ್ಷೇತ್ರದವರಿಗೆ ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ ಕುರಿತು ಮಂಗಳವಾರ ಕನ್ನಡಭವನದಲ್ಲಿ ಆಯೋಜಿಸಿದ ಅರ್ಧ ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.   ತಮ್ಮ ಮನೆಯಲ್ಲಿ ಹಾಗೂ ಚರ್ಚಿನಲ್ಲಿ ಕೈಗೊಂಡಿರುವ ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಗಳ ತಮ್ಮ ದೀರ್ಘ ಅನುಭವವನ್ನು ಹಂಚಿಕೊಂಡರು.

ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾಯ೯ಕ್ರಮದಲ್ಲಿ 

ಸಂಪನ್ಮೂಲ ವ್ಯಕ್ತಿಯಾಗಿ  ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಕಾರ್ಯಪಾಲಕ ನಿರ್ದೇಶಕ ಡಾ. ರಾಜೇಂದ್ರ ಕಲ್ಬಾವಿ, ಮಳೆನೀರು ಸಂಗ್ರಹಣೆ ವಿಧಾನಗಳು ಹಾಗೂ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಪದ್ಧತಿಗಳ ಕುರಿತು ವಿಡಿಯೋ ಮತ್ತು ಚಿತ್ರಗಳೊಂದಿಗೆ ಸವಿಸ್ತಾರ ಮಾಹಿತಿ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಿರ್ದೇಶಕ ಹಾಗೂ ಸಹಾಯಕ ನಗರ ಯೋಜನಾಧಿಕಾರಿ ಗುರುಪ್ರಸಾದ್ ಎ.ಬಿ. ಅವರು ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳು ಕಟ್ಟಡ ಅನುಮತಿ ನೀಡುವ ಸಂದರ್ಭದಲ್ಲಿ ಕಾನೂನುಬದ್ಧ ನಿಯಮಗಳನ್ನು ಪಾಲಿಸಿ ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಗಳ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು ಹಾಗೂ ಕಟ್ಟಡದ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವ ಇಂಜಿನಿಯರ್ ನವರು ಡ್ರಾಯಿಂಗ್ ನಂತೆ ಮಳೆನೀರು ಸಂಗ್ರಹಣಾ ಅಥವಾ ಜಲ ಮರುಪೂರಣ ವ್ಯವಸ್ಥೆಯ ಮಹತ್ವ ತಿಳಿಸಿ ಅಳವಡಿಕೆಯನ್ನು ಬಿಲ್ಡರ್ ಹಾಗೂ ಗುತ್ತಿಗೆದಾರರ ಮುಖಾಂತರ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಘದ ಅಧ್ಯಕ್ಷ ಸತೀಶ್ ಕೆ. ಭಂಡಾರಿ, ಕಾರ್ಯದರ್ಶಿ ಮೊಹಮ್ಮದ್ ಇಕ್ಬಾಲ್, ಸಿಡಿಡಿ ಇಂಡಿಯಾ ಸಂಸ್ಥೆಯ ಪ್ರೋಗ್ರಾಂ ಅಸೋಸಿಯೇಟ್ ಅಂಕಿತಾ, ಪುರಸಭೆಯ ಪರಿಸರ ಇಂಜಿನಿಯರ್ ಶಿಲ್ಪಾ ಎಸ್., ಇಂಜಿನಿಯರ್ ನಳಿನ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ ಸೇರಿದಂತೆ ಕಮ್ಯೂನಿಟಿ ಮೊಬಿಲೈಸರ್ ಆದ ಆಶಾ, ರಾಜೇಶ್ವರಿ, ಚಂದ್ರಿಕಾ, ಅಮಿತಾ ಮತ್ತು ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿಡಿಡಿ ಇಂಡಿಯಾ ಸಂಸ್ಥೆಯ ಹಿರಿಯ ಕಾರ್ಯಕ್ರಮ ಇಂಜಿನಿಯರ್ ಕಣ್ಣನ್ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

ಶಿಲ್ಪಾ ಎಸ್. ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಅಂಕಿತಾ ವಂದಿಸಿದರು.

ಕಾರ್ಯಕ್ರಮದಲ್ಲಿ ಶೂನ್ಯ ತ್ಯಾಜ್ಯ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ವೇದಿಕೆಯಲ್ಲಿ ಸ್ಟೀಲ್ ಜಗ್  ಲೋಟಗಳ ಮುಖಾಂತರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು, ಸಭಾಂಗಣದಲ್ಲಿ 20 ಲೀಟರ್ ನೀರಿನ ಕ್ಯಾನ್ ಮತ್ತು ಸ್ಟೀಲ್ ಲೋಟಗಳನ್ನು ಇರಿಸಲಾಗಿತ್ತು. ಸ್ವಾಗತವನ್ನು ಗುಲಾಬಿ ಹೂ ನೀಡುವ ಮುಖಾಂತರ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಸಸಿಯನ್ನು ಬಟ್ಟೆ ಚೀಲದಲ್ಲಿ ನೀಡುವ ಮುಖಾಂತರ ಗೌರವ ಸ್ಮರಣಿಕೆ ನೀಡಲಾಯಿತು. ಊಟದ ವ್ಯವಸ್ಥೆಯನ್ನು ಫೈಬರ್ ಪ್ಲೇಟ್ನಲ್ಲಿ ಮಾಡಲಾಗಿತ್ತು. ತನ್ಮೂಲಕ ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಪೇಪರ್  ತ್ಯಾಜ್ಯಕ್ಕೆ ಕಡಿವಾಣ ಹಾಕಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article