ಕಬ್ಬಿಣದ ಪಿಲ್ಲರ್‌ಗಳನ್ನು ಕಳವು
Saturday, April 4, 2026
ಬಂಟ್ವಾಳ: ಪಿಡಬ್ಲ್ಯುಡಿ ಗುತ್ತಿಗೆದಾರರು ಕಟ್ಟಡ ನಿರ್ಮಾಣಕ್ಕಾಗಿ ದಾಸ್ತಾನಿಟ್ಟಿದ್ದ ಕಬ್ಬಿಣದ ಪಿಲ್ಲರ್‌ಗಳನ್ನು ಕಳವುಗೈದ ಘಟನೆ ಇರಾ ಗ್ರಾಮದ ಆಚೆಬೈಲು ಎಂಬಲ್ಲಿ ನಡೆದಿದೆ.
ಈ ಬಗ್ಗೆ ಇರಾ ಗ್ರಾಮದ ಪರಪ್ಪು ನಿವಾಸಿ ಹನೀಫ್ ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಉಳ್ಳಾಲ ತಾಲೂಕು ಇರಾ ಗ್ರಾಮದ ಆಚೆಬೈಲು ಎಂಬಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಕಲ್ಲು, ಜಲ್ಲಿ, ಮರಳು ಹಾಗೂ ಕಬ್ಬಿಣದ ಸರಳುಗಳನ್ನು ಎ.2 ರಂದು ದಾಸ್ತಾನು ಮಾಡಲಾಗಿತ್ತು.
ಎ.3 ರಂದು ಸ್ಥಳಕ್ಕೆ ಹೋಗಿ ನೋಡಿದಾಗ, ಅಲ್ಲಿದ್ದ 10 ಕಬ್ಬಿಣದ ಪಿಲ್ಲರ್‌ಗಳ ಪೈಕಿ 5 ಕಬ್ಬಿಣ ಪಿಲ್ಲರ್‌ಗಳು ಕಾಣೆಯಾಗಿದ್ದು, ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳ್ಳತನವಾದ 300 ಕೆ.ಜಿ. ಕಬ್ಬಿಣದ ಪಿಲ್ಲರ್ ಮೌಲ್ಯ ಸುಮಾರು 18 ಸಾವಿರ ರೂಪಾಯಿ ಆಗಿರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.