ಕಾಂಕ್ರಿಟ್ ಕಂಬ, ತಂತಿ ಮುಳ್ಳು ಕಳವು
ಬಂಟ್ವಾಳ: ಜಮೀನಿಗೆ ಅಕ್ರಮ ಪ್ರವೇಶ ಮಾಡಿ ತಂತಿ ಮುಳ್ಳು ಬೇಲಿ ಕಿತ್ತಾಕಿದಲ್ಲದೆ ತಂತಿ ಮುಳ್ಳು ಅಳವಡಿಸಿದ 20 ಕಾಂಕ್ರಿಟ್ ಕಂಬಗಳನ್ನು ಹಾಗೂ ತಂತಿ ಮುಳ್ಳನ್ನು ಕಳವುಗೈದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚೇಳೂರು ಗ್ರಾಮದಲ್ಲಿ ಸಂಭವಿಸಿದೆ.
ಈ ಬಗ್ಗೆ ಬೊಳ್ಳಾರು ನಿವಾಸಿ ರೋಬರ್ಟ್ ಡಿಸೋಜ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಉಳ್ಳಾಲ ತಾಲೂಕು ಚೇಳೂರು ಗ್ರಾಮದ ಕೆದೂರು ಚರ್ಚಿಗೆ ಸಂಬಂಧಪಟ್ಟ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳಾದ ಜೋನ್ ಸ್ಟೀಫನ್ ಡಿಸೋಜ, ಡೈಯಾನಾ ಜೆಸ್ಟಿನ್ ಡಿಸೋಜ, ಡೆರಿಕ್ ಪ್ರಕಾಶ್ ಡಿ’ಸೋಜಾ, ಪ್ರಶಾಂತ್ ಡಿಸೋಜ ಹಾಗೂ ವಿನಿಲ್ ಎಂಬವರು ಜಮೀನಿಗೆ ಅಳವಡಿಸಿದ ಕಬ್ಬಿಣದ ಗೇಟ್ ಹಾಗೂ ತಂತಿ ಮುಳ್ಳು ಬೇಲಿಯನ್ನು ಕಬ್ಬಿಣದ ಗೇಟನ್ನು ಕಿತ್ತು ಶಾಲಾ ಬಳಿ ಬಿಸಾಕಿದ್ದಲ್ಲದೆ ತಂತಿ ಮುಳ್ಳು ಅಳವಡಿಸಿದ 20 ಕಾಂಕ್ರೀಟ್ ಕಂಬಗಳನ್ನು ಹಾಗೂ ತಂತಿ ಮುಳ್ಳನ್ನು ಕಳವುಗೈದು ಪರಾರಿಯಾಗಿದ್ದಾರೆ.
ಕಳವುಗೈದ 20 ಕಾಂಕ್ರೀಟ್ ಕಂಬ ಹಾಗೂ ತಂತಿ ಮುಳ್ಳಿನ ಮೌಲ್ಯ ಸುಮಾರು 15 ಸಾ. ರೂ. ಎಂದು ಅಂದಾಜಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.