ಕೇರಳಂ ವಿಧಾನಸಭೆ: ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ
Saturday, May 23, 2026
ಕಾಸರಗೋಡು: ಕೇರಳಂ ವಿಧಾನಸಭೆಯಲ್ಲಿ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೇರಳಂ ವಿಧಾನಸಭೆಯ ಅಧಿವೇಶನ ಗುರುವಾರದಿಂದ ಆರಂಭಗೊಂಡಿದ್ದು, ನೂತನ ಶಾಸಕರನ್ನು ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ.
ಪ್ರಮಾಣವಚನ ಸ್ವೀಕಾರದ ವಿಡಿಯೊವನ್ನು ಯುಡಿಎಫ್ ಶಾಸಕ ಅಶ್ರಫ್, ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಜನರಪರ ಕಾಳಜಿ ಮತ್ತು ನಿರೀಕ್ಷೆಗಳ ಸಾಕ್ಷಾತ್ಕಾರದ ಸಂಕಲ್ಪದೊಂದಿಗೆ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು, ಹದಿನಾರನೇ ಕೇರಳ ವಿಧಾನಸಭೆಯ ಸದಸ್ಯನಾಗಿ ಇಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡೆ ಎಂದು ತಿಳಿಸಿದ್ದಾರೆ.
ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು ಈ ಮಹತ್ತರ ಜವಾಬ್ದಾರಿಯನ್ನು ನೀಡಿದ ನನ್ನ ಕ್ಷೇತ್ರದ ಪ್ರೀತಿಯ ಜನತೆಗೆ ಹಾಗೂ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ನಾಡಿನ ಅಭಿವೃದ್ಧಿ ಮತ್ತು ಜನರ ಒಳಿತಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಸದಾ ನಿಮ್ಮೊಂದಿಗೇ ಜೊತೆಯಾಗಿರುವೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ, ಬೆಂಬಲ ಮತ್ತು ಪ್ರಾರ್ಥನೆಗಳು ಸದಾ ನನ್ನೊಂದಿಗೆ ಇರಲಿ ಎಂದಿದ್ದಾರೆ.