ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ದಶಮಾನೋತ್ಸವ: ಯಕ್ಷ ಕಲಾವಿದ ದಿನೇಶ್ ಶೆಟ್ಟಿ ಕಾವಲ್ ಕಟ್ಟೆಗೆ ಸಮ್ಮಾನ

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ದಶಮಾನೋತ್ಸವ: ಯಕ್ಷ ಕಲಾವಿದ ದಿನೇಶ್ ಶೆಟ್ಟಿ ಕಾವಲ್ ಕಟ್ಟೆಗೆ ಸಮ್ಮಾನ


ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಮೂಡುಬಿದಿರೆ ಘಟಕದ 10ನೇ ವಾರ್ಷಿಕೋತ್ಸವವು ಅಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆಯಿತು.  


ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಯಕ್ಷಧ್ರುವ  ಸತೀಶ್ ಶೆಟ್ಟಿ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸಂಸ್ಕೃತಿ, ಸಂಸ್ಕಾರ, ಪ್ರೋತ್ಸಾಹ ಕೇವಲ ವೇದಿಕೆಗೆ ಮಾತ್ರ ಸೀಮಿತವಾಗಬಾರದೆನ್ನುವ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ ಒಟ್ಟು ಮೂರೂವರೆ ಸಾವಿರ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ, ಅಶಕ್ತ ಕಲಾವಿದರಿಗೆ ಮನೆ ನಿಮಾ೯ಣ, ಆಥಿ೯ಕ ನೆರವು, ಯಕ್ಷ, ನಾಟಕ, ಜಾನಪದ ಕಲಾವಿದರಾಗಿರುವ ದೈವಾರಾಧಕರಿಗೆ, ಕಂಬಳ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಇನ್ಸೂರೆನ್ಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ.  


ಮೇ. 30ರಂದು ಮಂಗಳೂರಿನಲ್ಲಿ ನಡೆಯುವ ಕಾಯ೯ಕ್ರಮದಲ್ಲಿ ಜಾತಿ ಬೇಧ ಮರೆತು 5 ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಫ್ ನೀಡಲಾಗುವುದು ಎಂದ ಅವರು ಸರಕಾರ ಹಾಗೂ ರಾಜಕೀಯ ವ್ಯಕ್ತಿಗಳಿಂದ ಸಹಕಾರ ಬಯಸದೆ ದಾನಿಗಳ ಸಹಕಾರದೊಂದಿಗೆ ಉತ್ತಮ ಕಾಯ೯ಗಳನ್ನು ಮಾಡಲಾಗುತ್ತಿದೆ ಎಂದರು. 


ಸಂಸ್ಥೆಯ ಮೂಡುಬಿದಿರೆ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗೆ ಅವರ  ಅಧ್ಯಕ್ಷತೆಯಲ್ಲಿ ಪಾವಂಜೆ ಮೇಳದ ಕಲಾವಿದರಾದ ದಿನೇಶ್ ಶೆಟ್ಟಿ ಕಾವಳಕಟ್ಟೆ  ಅವರನ್ನು ಸನ್ಮಾನಿಸಲಾಯಿತು. 

ಪುತ್ತಿಗೆ ಕ್ಷೇತ್ರ ಧರ್ಮದರ್ಶಿ ಕುಲದೀಪ ಚೌಟ, ಮಾಜಿ ಸಚಿವ ಅಭಯಚಂದ್ರ ಜೈನ್, ದ.ಕ. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಟ್ರಸ್ಟಿನ ಸಂಚಾಲಕರಾದ ಪ್ರೇಮನಾಥ ಮಾರ್ಲ, ನೀಲೇಶ್ ಶೆಟ್ಟಿ ಒಂಟಿಕಟ್ಟೆ,   ಸಿಎ ಸುದೇಶ್ ರೈ, ಪುರುಷೋತ್ತಮ ಭಂಡಾರಿ ಅಡ್ಯಾರ್, ರವಿಚಂದ್ರ ಶೆಟ್ಟಿ ಅಶೋಕನಗರ, ಆಲಂಗಾರು ದೇವಸ್ಥಾನದ ಪ್ರಧಾನ ಅಚ೯ಕ ಸುಬ್ರಹ್ಮಣ್ಯ ಭಟ್ ಅಲಂಗಾರು ಮತ್ತಿತರ ಗಣ್ಯರು, ಮೂಡುಬಿದಿರೆ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಾಂತರಾಮ ಕುಡ್ವ ಇವರು ಸಂಮಾನ ಪತ್ರ ವಾಚಿಸಿದರು. ಸದಾಶಿವ ರಾವ್ ನೆಲ್ಲಿಮಾರ್ ಕಾರ್ಯಕ್ರಮ ನಿರೂಪಿಸಿದರು.

ನಂತರ ಪಾವಂಜೆ ಮೇಳದವರಿಂದ "ಸಮಗ್ರ ಭೀಷ್ಮ" ಯಕ್ಷಗಾನ ಬಯಲಾಟ ಜರುಗಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article