ಕಾರು ಢಿಕ್ಕಿ ಹೊಡೆದು ಪಾದಚಾರಿಗೆ ಗಾಯ
Monday, May 25, 2026
ಬಂಟ್ವಾಳ: ರಾ.ಹೆ.ಯ ಫರಂಗಿಪೇಟೆ ಜಂಕ್ಷನಿನಲ್ಲಿ ಕಾರು ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಸಂಭವಿಸಿದೆ.
ಗಾಯಾಳು ಪಾದಚಾರಿಯನ್ನು ಬೆಂಗಳೂರು-ವಿವೇಕನಗರ ನಿವಾಸಿ ನಿಖಿಲ್ (36) ಎಂದು ಹೆಸರಿಸಲಾಗಿದೆ. ಇವರು ಸಂಜೆ ಕೆಲಸ ಮುಗಿಸಿಕೊಂಡು ಮನೆ ಕಡೆ ಹೋಗಲು ಫರಂಗಿಪೇಟೆ ಜಂಕ್ಷನ್ನಿನಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಗಾಯಾಳುವನ್ನು ಸ್ಥಳೀಯರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.