ಶ್ರೀ ಕ್ಷೇ.ಧ.ಗ್ರಾ.ಯೋ.ಯ ಕೆದಿಲ ಒಕ್ಕೂಟ ತ್ರೈ ಮಾಸಿಕ ಸಭೆ

ಶ್ರೀ ಕ್ಷೇ.ಧ.ಗ್ರಾ.ಯೋ.ಯ ಕೆದಿಲ ಒಕ್ಕೂಟ ತ್ರೈ ಮಾಸಿಕ ಸಭೆ


ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆದಿಲ ಒಕ್ಕೂಟದ ತ್ರೈ ಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ ಅವರ ಅಧ್ಯಕ್ಷತೆಯಲ್ಲಿ ಕೆದಿಲ ಶ್ರೀ ದೇವಿ ಭಜನಾ ಮಂದಿರದಲ್ಲಿ ರವಿವಾರ ನಡೆಯಿತು.

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ವಿಚಕ್ಷಣಾಧಿಕಾರಿ ಕವಿತಾ ವಸಂತ ಅವರು ಮಹಿಳೆರ ಜವಾಬ್ದಾರಿ ಹಾಗೂ ಯೋಜನೆಯ ವಿವಿಧ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಸ್ವಾತಿ, ಉಪಾಧ್ಯಕ್ಷರಾಗಿ ರಾಜು, ಕಾರ್ಯದರ್ಶಿಯಾಗಿ ಸಾಜಿದ, ಜೊತೆ ಕಾರ್ಯದರ್ಶಿಯಾಗಿ ಅಸ್ವಿನಿ, ಕೋಶಾಧಿಕಾರಿಯಾಗಿ ಗಂಗಾಧರ್ ಆಯ್ಕೆಯಾದರು.

ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ದೀಪ, ಒಕ್ಕೂಟ ಸೇವಾಪ್ರತಿನಿಧಿ ಜಯಂತಿ, ಪದಾಧಿಕಾರಿಗಳಾದ ಸುಂದರ, ಪ್ರತಿಭಾ, ಜನಾರ್ಧನ್, ಚಂದ್ರಶೇಖರ ಉಪಸ್ಥಿತರಿದ್ದರು.

ಕಾರ್ಯಕ್ರಮ ಜವಾಬ್ದಾರಿ ಪ್ರಗತಿ ಹಾಗೂ ವನದುರ್ಗ ಸಂಘದ ಸದಸ್ಯರು ವಹಿಸಿದ್ದರು. ರೇವತಿ ಸ್ವಾಗತಿಸಿ, ರತ್ನವತಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article