ಭಡ್ತಿಗೊಂಡು ವಗಾ೯ವಣೆಯಾಗಿರುವ ಮುಖ್ಯ ಶಿಕ್ಷಕ ಸುರೇಂದ್ರ ಪೂಜಾರಿಗೆ ಬೀಳ್ಕೊಡುಗೆ, ಸನ್ಮಾನ

ಭಡ್ತಿಗೊಂಡು ವಗಾ೯ವಣೆಯಾಗಿರುವ ಮುಖ್ಯ ಶಿಕ್ಷಕ ಸುರೇಂದ್ರ ಪೂಜಾರಿಗೆ ಬೀಳ್ಕೊಡುಗೆ, ಸನ್ಮಾನ


ಮೂಡುಬಿದಿರೆ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಚ್ಚೇರಿಕಟ್ಟೆ ಇಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ಸುರೇಂದ್ರ ಪೂಜಾರಿ ಭಡ್ತಿಗೊಂಡು ಬೆಳುವಾಯಿ ಚರ್ಚ್ ಶಾಲೆಗೆ ವಗಾ೯ವಣೆಗೊಂಡ ಹಿನ್ನೆಲೆಯಲ್ಲಿ ಪುಚ್ಚೇರಿಕಟ್ಟೆ ಶಾಲೆಯಲ್ಲಿ ಶನಿವಾರ ಸನ್ಮಾನಿಸಿ ಬೀಳ್ಕೊಡಲಾಯಿತು.

ಸುರೇಂದ್ರ ಪೂಜಾರಿ ಅವರು ಸ.ಕಿ.ಪ್ರಾ. ಶಾಲೆ ಪುಚ್ಚೇರಿ ಕಟ್ಟೆಯಲ್ಲಿ 25 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದರು. ಇವರ  ಸುದೀರ್ಘ ಸೇವೆಯನ್ನು ಸ್ಮರಿಸಿ ಪೋಷಕರು ಹಳೆ ವಿದ್ಯಾರ್ಥಿಗಳು ಹಾಗೂ ಊರ ವಿದ್ಯಾಭಿಮಾನಿಗಳು ಸೇರಿಕೊಂಡು ಶಾಲು ಹೊದಿಸಿ, ಹಾರವನ್ನು ಹಾಕಿ, ಫಲ ಪುಷ್ಪಗಳನ್ನು ನೀಡಿ ಕೊಡುಗೆಗಳನ್ನು ನೀಡುವುದರ ಮೂಲಕ ಸನ್ಮಾನಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ವಾರ್ಡ್ ಕೌನ್ಸಿಲರ್ ಆಗಿರುವ  ಪುರಂದರ ದೇವಾಡಿಗ, ಎಸ್ ಡಿ.ಎಮ್.ಸಿ ಅಧ್ಯಕ್ಷ  ಭಾಸ್ಕರ ಆಚಾರ್ಯ ,ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮೂಡಬಿದಿರೆ ಘಟಕದ ಅಧ್ಯಕ್ಷರಾಗಿರುವ ರಾಮಕೃಷ್ಣ ಶಿರೂರು, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಮೂಡುಬಿದಿರೆ ಘಟಕದ ಅಧ್ಯಕ್ಷೆ  ನಾಗರತ್ನ ಶಿರೂರು, ಉಪಾಧ್ಯಕ್ಷ ಸುಧಾಕರ್ ಸಾಲಿಯಾನ್, ಸುರೇಂದ್ರ ಪೂಜಾರಿ ಅವರ ಧರ್ಮಪತ್ನಿ  ಮೋಹಿನಿ, ಶಾಲೆಯ ನಿಕಟಪೂರ್ವ ಎಸ್. ಡಿ.ಎಂ.ಸಿ ಅಧ್ಯಕ್ಷ  ಕೃಷ್ಣನಾಯಕ್, ಶಿವಪ್ರಸಾದ್,ಅಂಗನವಾಡಿ ಕಾರ್ಯಕರ್ತೆ  ವಿಜಯ ಹಾಗೂ ಅಡುಗೆ ಸಿಬ್ಬಂದಿ ರೇವತಿ, ರಾಜಶ್ರೀ ಉಪಸ್ಥಿತರಿದ್ದರು. 

ಇದೇ ಸಂದಭ೯ದಲ್ಲಿ ಪುರಸಭಾ ಮಾಜಿ ಸದಸ್ಯ ಪುರಂದರ ದೇವಾಡಿಗ ಅವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಚ್ಚೇರಿ ಕಟ್ಟೆಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ,ನೀರಿನ ಬಾಟಲ್ ಹಾಗೂ ಲೇಖನ ಸಾಮಗ್ರಿಗಳನ್ನು ಕೊಡುಗೆಯಾಗಿ ವಿತರಿಸಿದರು.

ಸುರೇಂದ್ರ ಪೂಜಾರಿ ಮುಖ್ಯ ಅವರು ವಿದ್ಯಾರ್ಥಿಗಳಿಗೆ ಛತ್ರಿಯನ್ನು ಕೊಡುಗೆಯಾಗಿ ನೀಡಿದರು. 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಚ್ಚೇರಿ ಕಟ್ಟೆ ಇಲ್ಲಿನ ಮುಖ್ಯ ಶಿಕ್ಷಕಿ  ಮಹೇಶ್ವರಿ ಎನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಅಂಗನವಾಡಿ ಕಾರ್ಯಕರ್ತೆ ವಿಜಯ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article