ಆಶ್ಲೇಷ ನಕ್ಷತ್ರ ಹಿನ್ನೆಲೆ: ಕುಕ್ಕೆಯಲ್ಲಿ 2000ಕ್ಕೂ ಮಿಕ್ಕಿ ಆಶ್ಲೇಷ ಬಲಿ ಸೇವೆ

ಆಶ್ಲೇಷ ನಕ್ಷತ್ರ ಹಿನ್ನೆಲೆ: ಕುಕ್ಕೆಯಲ್ಲಿ 2000ಕ್ಕೂ ಮಿಕ್ಕಿ ಆಶ್ಲೇಷ ಬಲಿ ಸೇವೆ


ಸುಬ್ರಹ್ಮಣ್ಯ: ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಿಂಗಳಿಗೊಂದು ಬರುವ ಆಶ್ಲೇಷ ನಕ್ಷತ್ರ ದಿನವಾದ ಶುಕ್ರವಾರ 2000 ಮಿಕ್ಕಿ ಆಶ್ಲೇಷ ಬಲಿ ಸೇವೆಗಳು ಭಕ್ತರಿಂದ ನಡೆಯಿತು.


ಗುರುವಾರ ಸಂಜೆಯಿಂದಲೇ ಆಶ್ಲೇಷ ನಕ್ಷತ್ರ ಇದ್ದುದರಿಂದ ಗುರುವಾರ ಹಾಗೂ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತಾದಿಗಳು ಬಂದು ಕ್ಷೇತ್ರದಲ್ಲಿ ತಂಗಿ ಆಶ್ಲೇಷ ಬಲಿ ಸೇವೆಯನ್ನು ಪೂರೈಸಿರುತ್ತಾರೆ. 

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಸೇವೆಗಳು ಬೆಳಗ್ಗೆ ಮೂರು ಅಥವಾ ನಾಲ್ಕು ಬ್ಯಾಚಿನೊಂದಿಗೆ ಹಾಗೂ ಸಂಜೆ ಒಂದು ಬ್ಯಾಚಿನಲ್ಲಿ ಏಕಾದಶಿಯ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ನಡೆಯುತ್ತದೆ. ಶನಿವಾರ ತಿಂಗಳಲ್ಲಿ ಬರುವ ಶುದ್ಧ ಷಷ್ಟಿಯಾದುದರಿಂದ ಷಷ್ಟಿ ವೃತ ಮಾಡುವವರು ಅಥವಾ ಷಷ್ಟಿ ಸೇವೆ ಮಾಡುವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬರಲಿರುವುದಾಗಿ ಅಂದಾಜಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article