ಒಂಟಿ ಮಹಿಳೆ ಜೀವನಕ್ಕೆ ಆಧಾರವಾಗಿದ್ದ ಊರ ಕೋಳಿಗಳು ಬೀದಿ ನಾಯಿ ಪಾಲು

ಒಂಟಿ ಮಹಿಳೆ ಜೀವನಕ್ಕೆ ಆಧಾರವಾಗಿದ್ದ ಊರ ಕೋಳಿಗಳು ಬೀದಿ ನಾಯಿ ಪಾಲು


ಉಳ್ಳಾಲ: ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ನಲ್ಲಿ ಸುಮಾರು 40 ವರುಷದಿಂದ ವಾಸಿಸುತ್ತಿರುವ ಪುಷ್ಪಾವತಿ ಎಂಬುವವರು  ಎರಡು ವರ್ಷದ ಹಿಂದೆ ಅನಾರೋಗ್ಯದಿಂದ ತನ್ನ ಗಂಡನನ್ನು ಕಳೆದುಕೊಂಡು ಒಂಟಿ ಮಹಿಳೆಯಾಗಿ ಜೀವನವನ್ನು ನಡೆಸುತ್ತಿದ್ದಾರೆ. 

ಮಕ್ಕಳು ಯಾರು ಇಲ್ಲದೆ ಈ ಒಂಟಿ ಮಹಿಳೆಗೆ  ಜೀವನ ಸಾಗಿಸಲು ತಾನು ಕಷ್ಟಪಟ್ಟು ಸಾಕುತ್ತಿರುವ 10-20 ಊರ ಕೋಳಿಗಳೇ ತನ್ನ ಅನ್ನದ ದಾರಿಯಾಗಿತ್ತು, ಆದರೆ ಬಾಳೆಪುಣಿ ವ್ಯಾಪ್ತಿಯಲ್ಲಿ ವಿಪರೀತ ಬೀದಿ ನಾಯಿಗಳ  ಕಾಟದಿಂದಾಗಿ ತಾನು  ಭದ್ರವಾಗಿ ಗೂಡಿನಲ್ಲಿ ಇಟ್ಟು ಸಾಕುತ್ತಿದ್ದ  20 ಕೋಳಿಗಳನ್ನು ಬಿದಿ ನಾಯಿಗಳು ಗೂಡಿನ ಒಳಗೆ ನುಗ್ಗಿ  ಸಾಯಿಸಿದೆ.

ಸುಮಾರು 15,000 ರೂ ನಷ್ಟವನ್ನು ಅನುಭವಿಸುತ್ತಿರುವ ಇವರ  ಬದುಕಿಗೆ ಆಧಾರವಾಗಿದ್ದ  ಒಂದೇ ಒಂದು ದಾರಿ ಕೂಡ ಮುಚ್ಚಿ ಹೋಗಿ ಒಂಟಿ ಮಹಿಳೆಗೆ ದಿಕ್ಕೇ  ತೋಚದಂತಾಗಿದೆ. 

ಆರ್ಥಿಕವಾಗಿ ದಿನನಿತ್ಯದ  ಆಹಾರ ಸಾಮಗ್ರಿಗು ಕಷ್ಟಪಡುತ್ತಿರುವ ಇವರು  ಆದ ನಷ್ಟಕ್ಕೆ  ಪರಿಹಾರಕ್ಕಾಗಿ  ಗ್ರಾಮ ಆಡಳಿತ ಗ್ರಾಮ ಸರಕಾರ ಮತ್ತು ಇಲಾಖೆಯನ್ನು ಅಂಗಲಾಚುತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article