ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಡಿ ಪಡೆದ ಹಕ್ಕುಗಳೇ ಹೆಚ್ಚು-ಹೋರಾಟ ಅನಿವಾರ್ಯ: ಪಿಂಚಣಿದಾರರ ಸಮಾವೇಶದಲ್ಲಿ ರವಿ ಡಿ. ಚೆಣ್ಣನ್ನನವರ್
ಈ ಹೋರಾಟದ ಪ್ರಯತ್ನದ ಉದ್ದೇಶಗಳು ಪ್ರತೀ ಕಾರ್ಮಿಕನಿಗೂ ಮನವರಿಕೆ ಆಗಬೇಕು. ಕಾರ್ಮಿಕ ತನ್ನ ಹಕ್ಕುಗಳಿಗಾಗಿ ಯಾವುದೇ ಅಧಿಕಾರಿಗಳಿಗೆ ದಂಬಾಲು ಬೀಳದೆ, ನ್ಯಾಯಾಲಯದ ಮೆಟ್ಟಿಲು ಹತ್ತದೆ, ಕಛೇರಿ ಕಚೇರಿಗಳಿಗೆ ಅಲೆದಾಟ ಮಾಡದೆ ಕಾರ್ಮಿಕ ಹಕ್ಕುಗಳು ಕಾರ್ಮಿಕನಿಗೆ ತಲುಪಬೇಕು ಎಂದು ಹೇಳಿದರು.
ಕಲ್ಯಾಣ ಮಂಡಳಿಯು ಆಗಸ್ಟ್ 1 ರಿಂದ ಪ್ರತೀ ಜಿಲ್ಲೆಯಲ್ಲೂ ಜಾಗ್ರತಿ ಸಮಾವೇಶಗಳನ್ನು ನಡೆಸುತ್ತೇವೆ. ಕಾರ್ಮಿಕ ದುಡಿಯುತ್ತಿರುವ ಪ್ರದೇಶಗಳಿಗೆ ಬೇಟಿ ನೀಡುತ್ತೇವೆ. ಶಿಕ್ಷಣದ ಧನ ಸಹಾಯವನ್ನು ಕನಿಷ್ಠ 5 ಸಾವಿರ ಮತ್ತು ಈಗಾಗಲೇ ನೀಡಲಾಗುತ್ತಿರುವ ಉನ್ನತ ವ್ಯಾಸಂಗದ ಧನಸಹಾಯಗಳನ್ನು ದುಪ್ಪಟ್ಟುಗೊಳಿಸುವ ಯೋಜನೆ ಇದೆ. ಸ್ಪರ್ದಾತ್ಮಕ ಪರೀಕ್ಷೆ ಮತ್ತು ತಾಂತ್ರಿಕ ಶಿಕ್ಷಣದ ತರಬೇತಿಗೆ ಕಾಯಂ ಯೋಜನೆಯನ್ನು ತರುವ ಯೋಚನೆ ಕಲ್ಯಾಣ ಮಂಡಳಿಗೆ ಇದೆ. ಕಾರ್ಮಿಕ ಪಿಂಚಣೆಯನ್ನು 3 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಸರಕಾರಕ್ಕೆ ನೀಡಲಾಗಿದೆ ಎಂದರು.
ಕಾರ್ಮಿಕ ಇಲಾಖೆಯ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಅಯುಕ್ತೆ ನಾಝಿಯಾ ಸುಲ್ತಾನ್ ಅವರು ಮಾತನಾಡಿ, ಕಾರ್ಮಿಕ ಮಂಡಳಿಯು ಕಾರ್ಮಿಕ ಕಲ್ಯಾಣದಲ್ಲಿ ಸಹಕರಿಸುತ್ತಿದೆ ಕಟ್ಟಡ ಕಾರ್ಮಿಕರು ಕೂಡ ತಮ್ಮ ಕನಿಷ್ಠ ಕರ್ತವ್ಯಗಳಾದ ನವೀಕರಣ, ಸೂಕ್ತ ದಾಖಲೆಗಳನ್ನು ಒದಗಿಸುವ ಕೆಲಸವನ್ನು ಮಾಡಬೇಕು.ಸೂಕ್ತ ದಾಖಲೆಗಳಿಲ್ಲದೆ ಕಾರ್ಮಿಕರ ಸವಲತ್ತುಗಳು ಸಿಗದೇ ಹೋಗುವುದು ನಮಗೂ ನೋವಿನ ವಿಚಾರ ಹಾಗಾಗಿ ಕಾರ್ಮಿಕರು ತಮ್ಮ ಕಲ್ಯಾಣ ಮಂಡಳಿ ಮತ್ತು ತಮ್ಮ ಸಂಘಗಳ ಜೊತೆಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಇದರ ರಾಜ್ಯ ಅಧ್ಯಕ್ಷ ಕೆ. ಮಹಂತೇಶ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕಟ್ಟಡ ಕಾರ್ಮಿಕರಿಗೆ ರಟ್ಟೆಯ ಬಲ ಮತ್ತು ಅವರ ಶ್ರಮ ಹೊರತು ಅವರಲ್ಲಿ ಬೇರೇನೂ ಇಲ್ಲ ಈ ದೇಶದ ಕಟ್ಟಡ, ಅಣೆಕಟ್ಟು, ಮಹಲು, ಮೆಟ್ರೋ, ರೖಲುಹಳಿ, ಫ್ಲೈ ಓವರ್ ಗಳಲ್ಲಿ ನಮ್ಮ ಕಾರ್ಮಿಕರ ರಕ್ತ ಇದೆ.ಕಟ್ಟಡ ವಲಯದಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲ ಈ ನಿಟ್ಟಿನಲ್ಲಿ ಕಾರ್ಮಿಕರ ಸುರಕ್ಷತೆ ಮತ್ತು ಬದ್ರತೆಗಾಗಿ ನಾವು ನಡೆಸಿದ ನಮ್ಮ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದ್ದು ಈ ಕಲ್ಯಾಣ ಮಂಡಳಿಯ ರಚನೆಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ಶ್ರಮವಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು ವಹಿಸಿದ್ದರು.
ವೇದಿಕೆಯಲ್ಲಿ ಸಿಐಟಿಯು ದಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರಾಜ್ಯ ಮುಖಂಡರಾದ ವಸಂತ ಆಚಾರಿ, ಲಿಂಗರಾಜು ಬೆಂಗಳೂರು, ಚಂದ್ರಶೇಖರ ಕುಂದಾಪುರ, ಸುರೇಶ್ ಕಲ್ಲಾಗಾರ್, ಜಿಲ್ಲಾ ಅಧ್ಯಕ್ಷ ಕೆ. ಯಾದವ ಶೆಟ್ಟಿ ದ.ಕ ಜಿಲ್ಲಾ ಕೋಶಾಧಿಕಾರಿ ಯೋಗೀಶ್ ಜಪ್ಪಿನ ಮೊಗರು ಮತ್ತಿತರರು ಉಪಸ್ಥಿತರಿದ್ದರು.
.jpg)


