ಪಿಲಿಕುಳ: ಒಲಿಂಪಿಯಾಡ್ ತರಬೇತಿ ಕಾರ್ಯಾಗಾರ

ಪಿಲಿಕುಳ: ಒಲಿಂಪಿಯಾಡ್ ತರಬೇತಿ ಕಾರ್ಯಾಗಾರ


ಮಂಗಳೂರು: ಪಿಲಿಕುಳವು ಹಲವು ಅದ್ಭುತಗಳ ತಾಣವಾಗಿದ್ದು, ಪಶ್ಚಿಮ ಘಟ್ಟಗಳಲ್ಲಿ ವಿನಾಶದ ಅಂಚಿನಲ್ಲಿರುವ ಹಲವು ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಸಂರಕ್ಷಣೆಯನ್ನು ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪಡೆದುಕೊಳ್ಳಬೇಕು ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಎನ್. ಹೇಳಿದರು.

ಅವರು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಡೆದ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಒಲಿಂಪಿಯಾಡ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೇರಲು ಉತ್ತಮ ಗುಣಮಟ್ಟದ ಜ್ಞಾನವನ್ನು ನೀಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಶಿಕ್ಷಕರನ್ನು ಸಜ್ಜುಗೊಳಿಸುವ ಉದ್ದೇಶದಿಂದ ಈ ತರಬೇತಿ  ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಇಂತಹ ಒಲಿಂಪಿಯಾಡ್ ಸ್ಪರ್ಧೆಗಳಿಗೆ ಸಜ್ಜುಗೊಳಿಸುವ ಜವಾಬ್ದಾರಿ ಎಲ್ಲರದು ಎಂದು ಹೇಳಿದರು.

ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ರಿಸರ್ಚ್ ಇನ್ ಇಂಟರ‍್ಡಿಸಿಪ್ಲಿನರಿ ಸೈನ್ಸಸ್ ನಿರ್ದೇಶಕ ಪೊ. ಸಸಿಕುಮಾರ್ ಎನ್. ಮೆನನ್ ಮಾತನಾಡಿ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಪ್ರಾಯೋಗಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಅರ್ಥೈಸಿಕೊಡುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ. ಉಪನ್ಯಾಸಕರು ಈ ಕಾರ್ಯಾಗಾರದ ಸಂಪೂರ್ಣ ಸದುಪಯೋಗ ಪಡೆದುಕೊಂಡು, ತಮ್ಮ ತಮ್ಮ ಕಾಲೇಜುಗಳಲ್ಲಿ ಇದರ ಅನುಭವ ಹಾಗೂ ಜ್ಞಾನವನ್ನು ಅನುಷ್ಠಾನಗೊಳಿಸಬೇಕು ಎಂದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಉಪಸಮಿತಿ ಅಧ್ಯಕ್ಷ ಪೊ. ಜಿ. ಶ್ರೀನಿಕೇತನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಗಳನ್ನು ಸಹ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸುಲಭವಾಗಿ ನಡೆಸಲು ಸಾಧ್ಯವಾಗಿದೆ. ಆದರೆ ಜೀವಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ನಾವು ಇನ್ನೂ ಸಾಕಷ್ಟು ಮುಂದುವರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದ ಉಪನ್ಯಾಸಕರಿಗೆ ಸೂಕ್ತ ತರಬೇತಿ ನೀಡಿ, ಅವರ ಜ್ಞಾನ ಮತ್ತು ಬೋಧನಾ ಸಾಮಥ್ರ್ಯವನ್ನು ಮತ್ತಷ್ಟು ಪರಿಪಕ್ವಗೊಳಿಸುವ ಮೂಲಕ ಜೀವಶಾಸ್ತ್ರ ಶಿಕ್ಷಣವನ್ನು ಬಲಪಡಿಸಲು ನಾವೆಲ್ಲರೂ ಶ್ರಮಿಸಬೇಕೆಂದರು.

ಸೆಂಟರ್ ಫಾರ್ ಅಡ್ವಾನ್ಸ್ಡ್ ಲನಿರ್ಂಗ್ ಮಂಗಳೂರು ಇದರ ಟ್ರಸ್ಟಿಗಳಾದ ವಿಜಯ್ ಮೊರಸ್, ಪ್ರಾಂಶುಪಾಲ ಪೊ. ಸ್ಮಿತಾ ಹೆಗಡೆ ಉಪಸ್ಥಿತರಿದ್ದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಅಶೋಕ್ ಕೆ.ಆರ್. ಸ್ವಾಗತಿಸಿ, ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರ್ವಹಿಸಿದರು. ಸೆಂಟರ್ ಫಾರ್ ಅಡ್ವಾನ್ಸ್ಡ್ ಲನಿರ್ಂಗ್‌ನ ಡಾ. ರಶ್ಮಿ ಭಟ್ ವಂದಿಸಿದರು.

ನಂತರ ನಡೆದ ಅಧಿವೇಶನದಲ್ಲಿ ಮೂರು ವಿಭಾಗಗಳನ್ನು ಪ್ರತ್ಯೇಕ ಮಾಡಿ ಅದಕ್ಕೆ ಸಂಬಂಧಿತ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ಪೊ. ಸಸಿಕುಮಾರ್ ಎನ್. ಮೆನನ್ ಅವರ ನೇತೃತ್ವದ ತಂಡದೊಂದಿಗೆ ನಡೆಸಿಕೊಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article