ಹಾದಿಯ ಮರಿಯಮ್ ಸಂಶೀರ್‌ಗೆ ಬ್ರಿಲ್ಯಾಂಟ್ ಅವಾಂರ್ಡ್
Monday, August 10, 2026
ಉಳ್ಳಾಲ: ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ 7,262ನೇ ರ‍್ಯಾಂಕ್ ಗಳಿಸಿದ ತಲಪಾಡಿ ಗ್ರಾಮದ ಹಾದಿಯ ಮರಿಯಮ್ ಸಂಶೀರ್ ಅಖಿಲ ಭಾರತ ಮಟ್ಟದಲ್ಲಿ ಬ್ರಿಲ್ಯಾಂಟ್ ಅವಾರ್ಡ್ ಪಡೆದಿದ್ದಾರೆ.
ಬಿರ್ಲ್ಯಾಂಟ್ ಸ್ಟಡಿ ಸೆಂಟರ್ ಪಾಲ ಇದರ ಆಶ್ರಯದಲ್ಲಿ ಮಲಪ್ಪುರಂನಲ್ಲಿ ನಡೆದ ಮೆಡಿಕಲ್ ವಿಕ್ಟೋರಿ ಡೇ-2026 ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿಲಿಪ್ ಕೈನಿಕಾರ ಈ ಪ್ರಶಸ್ತಿ ಪ್ರದಾನ ಮಾಡಿದರು.
ಮೊಹಮ್ಮದ್ ಸಂಶೀರ್ ತಲಪಾಡಿ ಹಾಗೂ ಫಾತಿಮತ್ ಸಾಬಿಹ ಎಸ್. ದಂಪತಿಯ ಪುತ್ರಿ ಆಗಿರುವ ಇವರು, ಜೀ ಮೈನ್ ಪರೀಕ್ಷೆಯ ಇಂಜಿನಿಯರಿಂಗ್ ವಿಭಾಗದಲ್ಲಿಯೂ 8,074ನೇ ರ‍್ಯಾಂಕ್ ಗಳಿಸಿದ್ದಾರೆ. ಈಕೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ ಗಳಿಸಿದ್ದರು.