ಕುಕ್ಕೆಯಿಂದ ರೈತ ಧಾರ್ಮಿಕ ಚಳವಳಿ ಆರಂಭ
Sunday, September 27, 2026
ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿಯಿಂದ ಗ್ರಾಮೀಣ ರೈತರ ಮತ್ತು ಇತರ ಪ್ರದೇಶಗಳಲ್ಲಿರುವ ಧಾರ್ಮಿಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಲುವಾಗಿ ಪರಿಸರ ಸಂರಕ್ಷಣೆ ಎಂಬ ಹೆಸರಿನಲ್ಲಿ ಗ್ರಾಮೀಣ ರೈತರ ಬದುಕು ಬೀದಿ ಪಾಲು ಆಗುವುದರಿಂದ ಆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ರೈತ ಧಾರ್ಮಿಕ ಚಳವಳಿಯು ಸೆ.26 ರಿಂದ ಜೂನ್ 1ರ ತನಕ ನಡೆಯಲಿರುವುದೆಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದ್ದಾರೆ.
ಕಸ್ತೂರಿ ರಂಗನ್ ಸೂಕ್ಷ್ಮ ವಲಯ ವರದಿ ವಿರೋಧಿಸಿ ಹೋರಾಟಕ್ಕೆ ಜಯ ಸಿಗುವಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಮಾಡಿ ಹೊರಬಂದು ಸುಬ್ರಹ್ಮಣ್ಯದ ದಲ್ಲಿ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಪುಣ್ಯಕ್ಷೇತ್ರಗಳು, ಗ್ರಾಮೀಣ ಭಾಗದಲ್ಲಿರುವ ದೇವಸ್ಥಾನ, ಚಾವಡಿ ಜಾಗಗಳು, ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಸ್ಥಳಗಳು, ಪುರಾತನ ಕಾಲದಿಂದಲೂ ಕಾಡಿನ ಮಧ್ಯೆ ಇರುವ ಪ್ರಸಿದ್ಧ ಶ್ರದ್ಧಾ ಕೇಂದ್ರಗಳ ಜಾಗಗಳಿಗೆ ತೊಂದರೆಯಾಗುವ ಆತಂಕ ಎದುರಾಗಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿ ಪರಿಹಾರಕ್ಕಾಗಿ ರೈತ ಧಾರ್ಮಿಕ ಚಳವಳಿ ನಡೆಸಲಾಗುವುದೆಂದವರು ತಿಳಿಸಿದರು.
ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸದಸ್ಯರುಗಳಾದ ಜಯಪ್ರಕಾಶ್ ಕೂಜುಗೋಡು, ಅತ್ಯುತ್ತ ಗೌಡ ಸುಬ್ರಹ್ಮಣ್ಯ, ರಮಾನಂದ ಎಣ್ಣೆ ಮಜಲ್, ದಾಮೋದರ ಗುಂಡ್ಯ, ಅಶೋಕ್ ಕುಮಾರ್ ಮೂಲೆಮಜಲ್, ಶ್ರೀಕುಮಾರ್ ಬಿಲದ್ವಾರ ಮತ್ತಿತರರು ಉಪಸ್ಥಿತರಿದ್ದರು.