ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಮಿನಿ ಬ್ರಿಡ್ಜ್ ಮಾಸ್ಟರ್’ ತಾಂತ್ರಿಕ ಸ್ಪರ್ಧೆ

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಮಿನಿ ಬ್ರಿಡ್ಜ್ ಮಾಸ್ಟರ್’ ತಾಂತ್ರಿಕ ಸ್ಪರ್ಧೆ


ಉಜಿರೆ: ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ‘ಮಿನಿ ಬ್ರಿಡ್ಜ್ ಮಾಸ್ಟರ್’ ಎಂಬ ತಾಂತ್ರಿಕ ಸ್ಪರ್ಧೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ವಿದ್ಯಾರ್ಥಿಗಳು ತಯಾರಿಸಿದ ಸೇತುವೆಯ ಮಾದರಿಯನ್ನು ಮತ್ತು ಭಾರ ತೆಗೆದುಕೊಳ್ಳುವ ಸಾಮರ್ಥ್ಯ ಪರೀಕ್ಷೆಗೆ ಉಪನ್ಯಾಸಕರ ಮಾರ್ಗದಶನದೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಹೈಡ್ರಾಲಿಕ್ ವಿಧಾನದ ಉಪಕರಣದಿಂದ ಕಾರ್ಯಕ್ರಮವನ್ನು ಉಜಿರೆಯ ಎಸ್‌ಡಿಎಂ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾ ಕಿರಣ್ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ಇಂದು ನಿರ್ಮಿಸುವ ಮಿನಿ ಬ್ರಿಡ್ಜ್ ಮಾದರಿಗಳು ಮುಂದೊಂದು ದಿನ ಬೃಹತ್ ಸೇತುವೆಗಳ ನಿರ್ಮಾಣಕ್ಕೆ ಪ್ರೇರಣೆಯಾಗಬಹುದು. ಪ್ರತಿಯೊಂದು ಸೇತುವೆಯ ನಿರ್ಮಾಣದ ಹಿಂದೆ ಅತ್ಯಾಧುನಿಕ ತಂತ್ರಜ್ಞಾನ, ಇಂಜಿನಿಯರ್‌ಗಳ ಪರಿಶ್ರಮ ಹಾಗೂ ತಂಡದ ಕೆಲಸ ಅಡಗಿರುತ್ತದೆ. ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಲಿ ಹಾಗೂ ಹೊಸ ಆವಿಷ್ಕಾರಗಳಿಗೆ ಪ್ರೇರಣೆ ನೀಡಲಿ. ವಿದ್ಯಾರ್ಥಿಗಳ ಹೊಸ ಕಲ್ಪನೆಗಳು ಮತ್ತು ಕನಸುಗಳು ಅವರ ಮುಂದಿನ ಜೀವನದಲ್ಲಿ ಯಶಸ್ಸನ್ನು ತಂದುಕೊಡಲಿ ಎಂದು ಹೇಳಿದರು.

ಉಜಿರೆಯ ‘ರೈಡಿಂಗ್ ಜೋಡಿ’ ಎಂದೇ ಪ್ರಸಿದ್ಧರಾದ ಶ್ಯಾಮ್ ಕಾಮತ್ ಮಾತನಾಡಿ, ಇಂಜಿನಿಯರ್‌ಗಳು ಶಿಸ್ತು ಮತ್ತು ಸಮರ್ಪಣಾ ಭಾವನೆಯಿಂದ ಕೆಲಸ ಮಾಡಬೇಕು. ರೈಡಿಂಗ್ ಜೋಡಿಯಾಗಿ ನಾವೂ ಜನರ ನಡುವೆ, ವಿಶೇಷವಾಗಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಮೂಲಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತೇವೆ. ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಬೃಹತ್ ಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಹೆಸರೂ ಮೂಡಿಬರಲಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಮಾತನಾಡಿ, ಇಂತಹ ರಚನಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತವೆ. ಇಂತಹ ಯೋಜನೆಗಳ ಮೂಲಕ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದು ಹಾಗೂ ನವೀನ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ‘ರೈಡಿಂಗ್ ಜೋಡಿ’ ಎಂದೇ ಪ್ರಸಿದ್ಧರಾದ ಶ್ಯಾಮ್ ಕಾಮತ್ ಮತ್ತು ಶೈನಿ ಕಾಮತ್ವಿದ್ಯಾರ್ಥಿಗಳು ನಿರ್ಮಿಸಿದ್ದ ವಿಶಿಷ್ಟ ಮಿನಿ ಬ್ರಿಡ್ಜ್ ಸೆಲ್ಫಿ ಕಾರ್ನರ್ ಅನ್ನು ಉದ್ಘಾಟಿಸಿದರು. ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ್ ಜೈನ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ತೃಪ್ತಿ ಶೆಟ್ಟಿ ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಈಶ್ವರ್ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article