ಮೂಡುಬಿದಿರೆಯಲ್ಲಿ 'ಶಾರದಾನುಗ್ರಹ' ಮತ್ತು 'ಸಿರಿಪುರ' ಪ್ರಶಸ್ತಿ ಪ್ರದಾನ
ಪೊನ್ನೆಚಾರಿ ಶಾರದಾ ಮಹೋತ್ಸವದ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕಾಮತ್ ವಹಿಸಿದ್ದರು.
ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಅವರು ಪ್ರಶಸ್ತಿಯ ಹಿನ್ನೆಲೆ ಮತ್ತು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು.
ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರದಾನ ಕಾರ್ಯದರ್ಶಿ ಸುದರ್ಶನ ಎಂ. ಅವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು.
ಸಿರಿಪುರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಉದ್ಯಮಿ ನಾರಾಯಣ ಪಿ.ಎಂ. ಅವರು ಅನಿಸಿಕೆ ಹಂಚಿಕೊಂಡರು.
ಅಭಿನಂದನೆ: ಸುರಕ್ಷಿತ ಚಾಲನೆಗಾಗಿ ಸಾರಿಗೆ ಇಲಾಖೆಯಿಂದ ಮತ್ತು ಸರಕಾರದಿಂದ ಚಿನ್ನದ ಪದಕವನ್ನು ಪಡೆದಿರುವ ಮೂಡುಬಿದಿರಿಯ ಹಿರಿಯ ಚಾಲಕರಾದ ಗೋಪಾಲ ಎಂ. ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಬೆಂಗಳೂರಿನ ಉದ್ಯಮಿ ವಿಜಯ್ ಕುಮಾರ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾರದೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಡಾ. ರಾಮಕೃಷ್ಣ ಶಿರೂರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನಾಗರತ್ನ ಶಿರೂರು ಕಾರ್ಯಕ್ರಮ ನಿರ್ವಹಿಸಿ ಸನ್ಮಾನ ಪತ್ರ ವಾಚಿಸಿದರು.
ಶಿಕ್ಷಕ ಸುರೇಂದ್ರ ಪೂಜಾರಿ ವಂದಿಸಿದರು.