ವೆಯಿಟ್‌ಲಿಫ್ಟಿಂಗ್‌ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
Saturday, November 21, 2026
ಕಟೀಲು: ಬೆಂಗಳೂರು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 14ರ ವಯೋಮಾನದ ರಾಜ್ಯಮಟ್ಟದ 5ನೇ ಕರ್ನಾಟಕ ಮಿನಿ ಒಲಂಪಿಕ್‌ನ ವೆಯಿಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜು ಪ್ರೌಢಶಾಲೆಯ 8ನೇ ತರಗತಿಯ ರಾಘವ, 40 ಕೆ.ಜಿ. ದೇಹ ತೂಕ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ಉತ್ತರಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
8ನೇ ತರಗತಿಯ ಮನ್ವಿತ್ 60 ಕೆ.ಜಿ. ದೇಹ ತೂಕ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಪದಕ ಪಡೆದುಕೊಂಡಿದ್ದಾನೆ.