ಉಳ್ಳಾಲ ಶ್ರೀನಿವಾಸ್ ಮಲ್ಯರ ಜನ್ಮ ದಿನಾಚರಣೆ
Saturday, November 21, 2026
ಮಂಗಳೂರು: ಮಂಗಳೂರು ನಗರದ ಪದವ ಶಾಲೆ ಮುಂಭಾಗದಲ್ಲಿರುವ ಶ್ರೀನಿವಾಸ್ ಮಲ್ಯ ಉದ್ಯಾನವನದಲ್ಲಿ ಉಳ್ಳಾಲ ಶ್ರೀನಿವಾಸ್ ಮಲ್ಯ ಜನ್ಮ ದಿನಚರಣಾ ಸಮಿತಿ ನೇತೃತ್ವದಲ್ಲಿ ಆಧುನಿಕ ಪ್ರಾಂತ್ಯದ ಶಿಲ್ಪಿ ದಿ. ಉಳ್ಳಾಲ ಶ್ರೀನಿವಾಸ್ ಮಲ್ಯ ಅವರ 125ನೇ ಜನ್ಮ ದಿನಾಚರಣೆಯನ್ನು ಮಲ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಮಾಜಿ ಸಚಿವ ಬಿ. ರಾಮನಾಥ ರೈ, ಜನ್ಮದಿನ ಆಚರಣಾ ಸಮಿತಿ ಸಂಚಾಲಕಿ ಮಂಜುಳಾ ನಾಯಕ್, ಮಲ್ಯ ಕುಟುಂಬಸ್ಥರಾದ ಉಳ್ಳಾಲ ನರಹರಿ ಮಲ್ಯ, ಅರುಂಧತಿ ಮಲ್ಯ, ನಂದನ್ ಮಲ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ, ಮೆಸ್ಕಾಂ ನಿಗಮದ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಮೂಡದ ಅಧ್ಯಕ್ಷ ಸಂತೋಷ್ ಶೆಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೋ, ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಅಬ್ದುಲ್ ರವೂಫ್, ಶಶಿಧರ್ ಹೆಗ್ಡೆ, ಅನಿಲ್ ಕುಮಾರ್, ನವೀನ್ ಡಿಸೋಜ, ಮದರ್ ತೆರೆಸಾ ವಿಚಾರ ವೇದಿಕೆ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ಅಕಾಡೆಮಿಯ ಸದಸ್ಯ ಸಮರ್ಥ ಭಟ್, ಸಮಿತಿ ಅಧ್ಯಕ್ಷ ಟಿ.ಸಿ. ಗಣೇಶ್, ನೀತು ಶರಣ್, ರಾಜೇಶ್ ದೇವಾಡಿಗ, ಯೋಗೀಶ್ ನಾಯಕ್ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರೆಹಮಾನ್ ಖಾನ್ ಕುಂಜತ್ತಬೈಲ್ ನಿರೂಪಿಸಿದರು.